ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೆಡಿಯಾಲ ಅರಣ್ಯ ವಲಯದಲ್ಲಿ ಸುಮಾರು 25 ವರ್ಷದ ಹೆಣ್ಣಾನೆ ಸಾವನ್ನಪ್ಪಿದ ಬೆನ್ನಲ್ಲೇ ಮತ್ತೊಂದು 35 ವರ್ಷದ ಮತ್ತೊಂದು ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ಚಿಕ್ಕಬರಗಿ ಅರಣ್ಯದ ಕಾಳನಪುರ ಬೀಟ್ ನಲ್ಲಿ ನಡೆದಿದೆ.
ಮೇಲಿಂದ ಮೇಲೆ ಕಾಡಾನೆ ಸಾವನ್ನಪ್ಪುತ್ತಿರುವುದು ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಎಂದಿನಂತೆ ಚಿಕ್ಕಬರಗಿ ಅರಣ್ಯ ಕಾಳನಪುರ ಬೀಟ್ ನಲ್ಲಿದ್ದಾಗ ಆನೆಯೊಂದು ಸತ್ತು ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಆರ್.ಎಫ್.ಓ ಸಂದೀಪ್ ತೆರಳಿದ್ದಾರೆ.
ಆದರೆ ರಾತ್ರಿಯಾದ್ದರಿಂದ ಹಿಂತಿರುಗಿದ್ದು ಇಂದು ಮತ್ತೆ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆ ಬಳಿಕ ಕಾಡಾನೆಯ ಸಾವಿನ ಬಗ್ಗೆ ತಿಳಿಯ ಬೇಕಿದೆ.