ಮೈಸೂರು: ಪೊಲೀಸ್ ಕಾನ್ಸ್ ಸ್ಟೇಬಲ್ ನೇಮಕಾತಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಗಳು ಜನವರಿ 18 ರಿಂದ 23ರವರೆಗೆ ನಗರದ ರೇಸ್ಕೋರ್ಸ್ ಹಿಂಭಾಗದ ಸಶಸ್ತ್ರ ಮೀಸಲು ಪಡೆ ಮೈದಾನದ ಆವರಣದಲ್ಲಿ ನಡೆಯಲಿದ್ದು, ಆಯ್ಕೆ ಪರಾದರ್ಶಕವಾಗಿ ನಡೆಯಲಿದ್ದು ಮೂರನೇ ವ್ಯಕ್ತಿಗಳಿಗೆ ಹಣ ನೀಡಬೇಡಿ ಎಂದು ನಗರ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.ಪೋಲಿಸ್ ಕಾನ್ಸ್ ಸ್ಟೇಬಲ್ ನೇಮಕಾತಿಯು ಪಾರದರ್ಶಕ, ಗಣಕೀಕೃತ ಹಾಗೂ ಸಂಪೂರ್ಣ ಅರ್ಹತೆ ಹಾಗೂ ಮೀಸಲಾತಿ ಆಧಾರದಲ್ಲಿ ನಡೆಯಲಿದೆ. ಹೀಗಾಗಿ ಯಾವುದೇ ಅಭ್ಯರ್ಥಿಗಳು ಇಲಾಖೆಯ ಆಧಾರದಲ್ಲಿ ನಡೆಯಲದೆ. ಹೀಗಾಗಿ ಯಾವುದೇ ಅಭ್ಯರ್ಥಿಗಳು ಇಲಾಖೆಯ ನೌಕರಿಗಾಗಲಿ ಅಥವಾ ಹೊರಗಿನ ಮೂರನೇ ವ್ಯಕ್ತಿಗಾಗಲಿ ಉದ್ಯೋಗ ಕೊಡಿಸುವ ಸಲುವಾಗಿ ಹಣ ಕೊಡಬಾರದು ಎಂದು ನಗರ ಪೊಲೀಸ್ ಕಮಿಷನರ್ ಸುಬ್ರಹ್ಮಣೇಶ್ವರ್ ರಾವ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ನೇಮಕಾತಿಯ ಪರೀಕ್ಷೆಗಾಗಿ ಹಾಜರಾಗುವ ಅಭ್ಯರ್ಥಿಗಳು ದೈಹಿಕವಾಗಿ ಸದೃಢರಾಗಿರಬೇಕು. ಅಭ್ಯರ್ಥಿಗಳು ತಮ್ಮ ಹಿತದೃಷ್ಟಿಯಿಂದ ದೈಹಿಕ ಪರೀಕ್ಷೆಗೆ ಹಾಜರಾಗುವ ಮುನ್ನ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಬರಬೇಕು. ಪರೀಕ್ಷೆ ಸಮಯದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಅನಾಹುತ ಸಂಭವಿಸಿದಲ್ಲಿ ಇಲಾಖೆ ಹೊಣೆಯಲ್ಲ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದರು.
ನೇಮಕಾತಿಗಾಗಿ ಯಾರಾದರು ಹಣಕ್ಕಾಗಿ ಬೇಡಿಕೆ ಇಟ್ಟಲ್ಲಿ ದೂರು ನೀಡಬೇಕಾದ ದೂರವಾಣಿ ಸಂಖ್ಯೆಗಳು: ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕರು, ನೇಮಕಾತಿ ಮತ್ತು ತರಬೇತಿ ದೂ.ಸಂ.080-22943650, ಆರಕ್ಷಕ ಉಪ ಮಹಾ ನಿರೀಕ್ಷಕರು, ನೇಮಕಾತಿ ಮತ್ತು ತರಬೇತಿ ದೂ.ಸಂ.080-22942261, ನಗರ ಪೋಲಿಸ್ ಆಯುಕ್ತರು ದೂ.ಸಂ.0821-2418300ಗೆ ಕರೆ ಮಾಡಬಹುದು.