ಮೈಸೂರು: ನಂಜನಗೂಡು ಮೀಸಲು ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದ ಕಳಲೇ ಕೇಶವ ಮೂರ್ತಿ ಸ್ಪರ್ಧೇ ಮಾಡುವುದು ಖಚಿತವಾಗಿದ್ದು, ಜೆಡಿಎಸ್ ನ ವರಿಷ್ಟರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬುದು ಖಚಿತವಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಟೆಯ ಪ್ರಶ್ನೆಯಾಗಿರುವ ನಂಜನಗೂಡು ಉಪಚುನಾವಣೆ ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಎರಡನೇ ವಾರ ನಡೆವುದು ಖಚಿತವಾದ ಹಿನ್ನಲ್ಲೆಯಲ್ಲಿ ಉಪಚುನವಾಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಹುಡುಕಾಟ ನಡೆದಿದ್ದು, ಸಂಸದ ಧ್ರುವ ನಾರಾಯಣ್ ಸೋದರ ಸಂಬಂಧಿ ಹಾಗೂ ಎರಡು ಬಾರಿ ನಂಜನಗೂಡು ಚುನಾವಣೆಯಲ್ಲಿ ತೀರಾ ಅಲ್ಪ ಮತಗಳಿಂದ ಸೋಲು ಅನುಭವಿಸಿರುವ ಸಜ್ಜನ ರಾಜಕಾರಣಿ ಎಂದೇ ಜನರ ಅನುಕಂಪ ಇರುವ ಕಳಲೇ ಕೇಶವ ಮೂರ್ತಿಯನ್ನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಆಪ್ತರ ಮೂಲಕ ಆಹ್ವಾನ ನೀಡಿದ್ದಾರೆ.
ಕಾರ್ಯಕರ್ತರ ಸಭೆಯ ನಂತರ ತೀರ್ಮಾನ:
ಕಾಂಗ್ರೆಸ್ ಪಕ್ಷದಿಂದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ಬಂದಿರುವುದು ನಿಜ. ಈ ಬಗ್ಗೆ ಶೀಘ್ರದಲ್ಲೇ ಕಾರ್ಯಕರ್ತರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗವುದು. ಜೊತೆಗೆ ಈ ಬಗ್ಗೆ ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದು, ದೇವೇಗೌಡರು ಉಪಚುನಾವಣೆ ನಡೆಸುವುದು, ನಮಗೆ ಕಷ್ಟ. ನಮ್ಮದು ಪ್ರಾದೇಶಿಕ ಪಕ್ಷ ಎರಡು ರಾಜಕೀಯ ಪಕ್ಷಗಳ ನಡುವೆ ಹೋರಾಟ ನಡೆಸುವುದು ನಮ್ಮ ಕೈಯಲ್ಲಿ ಸಾಧ್ಯವಿಲ್ಲ, ಅಲ್ಲದೆ ಒಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕ್ಷೇತ್ರದ ಅಭಿವೃದ್ದಿ ದೃಷ್ಟಿಯಿಂದ ಸರಿಯಾದ ನಿರ್ಧರ ತೆಗೆದುಕೊಳ್ಳಲು ನೀನು ಸಮರ್ಥನಿದ್ದೀಯಾ ಎಂದು ಹೇಳಿದ್ದಾರೆ.
ಈ ಹಿನ್ನಲ್ಲೆಯಲ್ಲಿ ನಿನ್ನೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ಕಳಲೇ ಕೇಶವ ಮೂರ್ತಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ, ಕಾಂಗ್ರೆಸ್ ಸೇರುವ ಸೂಚನೆಯನ್ನು ಸಹ ನೀಡಿದ್ದಾರೆ.
ಅಭ್ಯರ್ಥಿಗಳ ದೊಡ್ಡ ಪಟ್ಟಿ:
ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್, ಮಾಜಿ ಸಂಸದ ಸಿದ್ದರಾಜು, ಕಾಗಳವಾಡಿ ಶಿವಣ್ಣ, ಕಾಡಾ ಮಾಜಿ ಅಧ್ಯಕ್ಷ ದೇವನೂರು ಶಿವಮಲ್ಲು, ಕಲಾವಿದ ಮದನ್ ಪಟೇಲ್, ಸಂಸದ ಧ್ರುವ ನಾರಾಯಣ್ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪುಷ್ಟಅಮರನಾಥ್ ಹೆಸರುಗಳು ಮಾದ್ಯಮಗಳಲ್ಲಿ ಕೇಳಿಬರುತ್ತಿದ್ದು, ಆದರೆ ರಾಜಕೀಯವಾಗಿ ಪ್ರತಿಷ್ಟೆ ಹಾಗೂ ಮುಂದಿನ ವಿಧಾನ ಸಭಾ ಚುನಾವಣೆಯ ದೃಷ್ಟಿಯಿಂದ ಶತಯಾಗತಯ ಶ್ರೀನಿವಾಸ್ ಪ್ರಸಾದ್ ಸೋಲಿಸಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಎಚ್ಚರಿಕೆಯಿಂದ ತಾವೇ ಖುದ್ದಾಗಿ ಕಳಲೇ ಕೇಶವ ಮೂರ್ತಿ ಅವರನ್ನ ಕಣಕ್ಕಿಳಿಸಲು ಆಸಕ್ತಿ ಹೊಂದಿದ್ದು, ಇದು ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರಿಗೆ ಬೇಸರ ತರಿಸಿದ್ದು ನಂಜನಗೂಡು ಗ್ರಾಮಗಳಲ್ಲಿ ಕುಂದುಕೊರೆತೆ ಸಭೆ ನಡೆಸಲು ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದ ಉಸ್ತುವಾರಿ ಸಚಿವ ಡಾಹೆಚ್.ಸಿ ಮಹದೇವಪ್ಪ ಒಂದೇ ದಿನ ಮಾತ್ರ ಗ್ರಾಮಗಳ ಪ್ರವಾಸ ಮಾಡಿ ಪ್ರವಾಸವನ್ನ ರದ್ದುಗೊಳಿಸಿದ್ದಾರೆ.