News Kannada
Monday, December 05 2022

ಮೈಸೂರು

ಪಂಚರಾಜ್ಯದ ಮತದಾರರ ಬೆರಳಿಗೆ ಬೀಳಲಿದೆ ಮೈಸೂರಿನ ಶಾಯಿ

Photo Credit :

ಪಂಚರಾಜ್ಯದ ಮತದಾರರ ಬೆರಳಿಗೆ ಬೀಳಲಿದೆ ಮೈಸೂರಿನ ಶಾಯಿ

ಮೈಸೂರು: ಮುಂದಿನ ತಿಂಗಳು ನಡೆಯಲಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಮೈಸೂರಿನ ಮೈಲಾಕ್ ನಿಂದ ಚುನಾವಣೆಗೆ  ಬಳಸುಲು 4.18 ಲಕ್ಷ ಅಳಿಸಲಾಗದ ಶಾಯಿ ಬಾಟಲ್ ನ್ನು ಚುನಾವಣಾ ಆಯೋಗಕ್ಕೆ ಪೂರೈಕೆ ಮಾಡಲಾಗುತ್ತಿದೆ.

ಮುಂದಿನ ತಿಂಗಳು ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ದೇಶದ ಅತ್ಯಂತ ದೊಡ್ಡ ರಾಜ್ಯ ಉತ್ತರಪ್ರದೇಶ ಸೇರಿದಂತೆ ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಕಾಂಡ್ ವಿಧಾನಸಭಾ ಚುನಾವಣೆಗೆ ಮತದಾರರ ಬೆರಳಿಗೆ ಹಾಕುವ ಅಳಿಸಲಾಗದ ಶಾಯಿಯನ್ನು ಪೂರೈಸುವಂತೆ ಭಾರತದ ಚುನಾವಣಾ ಆಯೋಗ ಕಳೆದ ಮೂರು ತಿಂಗಳ ಹಿಂದೆ ಮೈಸೂರು ಪೇಂಟ್ಸ್ ಅಂಡ್ ವಾನಿರ್ಷ್ ಲಿಮಿಟೆಡ್ ಗೆ 4.18 ಲಕ್ಷ ಅಳಿಸಲಾಗದ ಶಾಯಿಯನ್ನು ಪೂರೈಸುವಂತೆ ಕೇಳಿತ್ತು.

ಈ ಹಿನ್ನಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದಲ್ಲೇ ಮೈಲಾಕ್ ನಲ್ಲಿ 50 ಮಂದಿ ಖಾಯಂ ನೌಕರರು, ನೂರು ಮಂದಿ ಹೊರ ಗುತ್ತಿಗೆ ಕಾರ್ಮಿಕರು ದಿನದ 2 ಪಾಳಯದಲ್ಲೂ ಕೆಲಸ ಮಾಡುತ್ತಿದ್ದು, ಈಗಾಗಲೇ ಉತ್ತರ ಪ್ರದೇಶ ಸೇರಿದಂತೆ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಗೆ ಅಳಿಸಲಾಗದ ಶಾಯಿಯನ್ನ ಪೂರೈಸುವ ಪ್ರಕ್ರಿಯೆ ಆರಂಭವಾಗಿದೆ.

ಯಾವ ರಾಜ್ಯಕ್ಕೆ ಎಷ್ಟೆಷ್ಟು?: ಪಂಚರಾಜ್ಯಗಳ ಚುನಾವಣೆಗೆ ಒಟ್ಟು 10 ಎಂಎಲ್ ಸಾಮಾರ್ಥ್ಯದ 4.18 ಲಕ್ಷ ಅಳಿಸಲಾಗದ ಶಾಯಿಯನ್ನು ಪೂರೈಸುವಂತೆ ಕೇಂದ್ರ ಚುನಾವಣಾ ಆಯೋಗ ಮೈಲಾಕ್ ಗೆ ಬೇಡಿಕೆ ಸಲ್ಲಿಸಿತ್ತು. ಇದರ ಅನ್ವಯ ಫೆಬ್ರವರಿ 4 ರಂದು ಒಂದೇ ಹಂತದಲ್ಲಿ ಚುನಾವಾಣೆ ನಡೆಯುವ ಗೋವಾ ರಾಜ್ಯಕ್ಕೆ 10 ಎಂ.ಎಲ್ ನ 4 ಸಾವಿರ ಬಾಟಲ್ ಪೂರೈಕೆ ಮಾಡಲಾಗಿದ್ದು, ಪಂಜಾಂಬ್ ಗೆ 10 ಎಂ.ಎಲ್ ನ 52 ಸಾವಿರ ಬಾಟಲ್ ಗಳನ್ನ ಪೂರೈಕೆ ಮಾಡಲಾಗಿದ್ದು, ಮಣಿಪುರಕ್ಕೆ 7,300 ಬಾಟಲ್ ಗಳನ್ನ ಈಗಾಗಲೇ ಪೂರೈಕೆ ಮಾಡಲಾಗಿದೆ.

ಫೆಬ್ರವರಿ 11 ರಿಂದ ಮಾರ್ಚ್ 8ರವರೆಗೆ 7 ಹಂತದಲ್ಲಿ ಮತದಾನ ನಡೆಯಲಿರುವ ಉತ್ತರ ಪ್ರದೇಶ ರಾಜ್ಯಕ್ಕೆ 10 ಎಂ.ಎಲ್ ನ 3.30 ಲಕ್ಷ ಬಾಟಲ್ ಪೂರೈಸಿದ್ದು ಜನವರಿ 16ರಂದು 1 ಲಕ್ಷ ಬಾಟಲ್ ಗಳನ್ನ ಕಳುಹಿಸಲಾಗಿದ್ದು ಇನ್ನೂಳಿದ 2.30 ಲಕ್ಷ ಬಾಟಲುಗಳನ್ನ ಜನವರಿ 24 ರಂದು ಕಳುಹಿಸಲು ಮೈಲಾಕ್ ಸಿದ್ದತೆ ಮಾಡಿಕೊಂಡಿದ್ದು ಚಿಕ್ಕ ರಾಜ್ಯ ಉತ್ತಾರಕಾಂಡ್ ಗೆ 25 ಸಾವಿರ ಅಳಿಸಲಾಗ ಶಾಯಿಯನ್ನ ಪೂರೈಕೆ ಮಾಡಲು ಕೇಂದ್ರ ಚುನಾವಣಾ ಆಯೋಗ ಬೇಡಿಕೆ ಸಲ್ಲಿಸಿದೆ ಎಂದು ಮೈಲಾಕ್ ನ ಅಧ್ಯಕ್ಷ ಹೆಚ್.ಎ ವೆಂಕಟೇಶ ತಿಳಿಸಿದ್ದಾರೆ.

ಬಾಟಲ್ ಗಳ ಬೆಲೆ ಎಷ್ಟು?: 10 ಎಂ.ಎಲ್ ನ ಅಳಿಸಲಾಗದ ಶಾಯಿಯ ಬೆಲೆ 142 ರೂಪಾಯಿ ನಿಗದಿ ಪಡಿಸಲಾಗಿದ್ದು, 1 ಬಾಟಲ್ ನಿಂದ 750 ಜನ ಮತದಾರರ ಬೆರಳಿಗೆ ಶಾಯಿ ಹಚ್ಚಬಹುದು ಎಂದು ಮೈಲಾಕ್ ನ ಪ್ರಧಾನ ವ್ಯವಸ್ಥಾಪಕ ಹರಕುಮಾರ್ ತಿಳಿಸಿದ್ದು, ಮೊದಲ ಬಾರಿಗೆ ನೋಟು ರದ್ದತಿ ಆದ ನಂತರ ಬ್ಯಾಂಕ್ ಗಳು ಗುರುತಿಗಾಗಿ ಅಳಿಸಲಾಗದ ಶಾಯಿಯನ್ನ ಬಳಸುವಂತೆ ತಿಳಿಸಿದ್ದು, ಮೂರು ಲಕ್ಷ ಬಾಟಲ್ ಗಳನ್ನ ದೇಶದ ಆರ್ ಬಿಐ ನಿರ್ದೇಶನದಂತೆ ವಿವಿಧ ಬ್ಯಾಂಕ್ ಗಳಿಗೆ ಮೈಲಾಕ್ ಅಳಿಸಲಾಗದ ಶಾಯಿಯನ್ನ ಪೂರೈಕೆ ಮಾಡಿದ್ದು, ಮೊದಲ ಬಾರಿಗೆ ಚುನಾವಣೇತ್ತರ ಉದ್ದೇಶಕ್ಕಾಗಿ ಮೈಲಾಕ್ ಆಳಿಸಲಾಗದ ಶಾಯಿಯನ್ನ ಪೂರೈಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆದಿದೆ.

See also  ಮದುವೆ ಊಟ ಸೇವಿಸಿ 59 ಮಂದಿ ಅಸ್ವಸ್ಥ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು