ಮೈಸೂರು: ಗ್ರಾಮದಿಂದ ಹಸುಗಳನ್ನ ಕದ್ದು ವಾಹನದಲ್ಲಿ ಸಾಗಿಸುತಿದ್ದ ಹಸುಗಳ್ಳರನ್ನ ಗ್ರಾಮಸ್ಥರೇ ಹಿಂಬಾಲಿಸಿ ಹಸುಗಳನ್ನು ರಕ್ಷಸಿದ ಘಟನೆ ಕೆ.ಆರ್ ನಗರ ತಾಲ್ಲೂಕಿನ ಅರಕೆರೆ ಬಳಿ ನಡೆದಿದ್ದು ವಾಹನ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.
ಏನಿದು ಘಟನೆ?:
ಹುಣುಸೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಿಂದ ಇಂದು ಬೆಳಗಿನ ಜಾವ ನಾಲ್ಕು ಹಸು ಹಾಗೂ ಎರಡು ಕರುವನ್ನ ಕದ್ದ ಕಳ್ಳರು ಕ್ಯಾಂಟರ್ ವಾಹನದಲ್ಲಿ ತುಂಬಿಕೊಂಡು ಹೊರಟರು. ಇದನ್ನ ಕಂಡ ಗ್ರಾಮಸ್ಥರು ವಾಹನವನ್ನು ಹಿಂಬಾಲಿಸಿದಾಗ ಕೆ.ಆರ್ ನಗರದ ಅರಕೆರೆಯ ಕ್ರಾಸ್ ಬಳಿ ವೇಗದಿಂದ ಚಲಿಸುತ್ತಿದ್ದ ವಾಹನ ಆಯಾ ತಪ್ಪಿ ರಸ್ತೆಯ ತಿರುವಿನ ಹಳ್ಳದಲ್ಲಿ ಬಿದಿದೆ. ಹಳ್ಳಕ್ಕೆ ವಾಹನ ಬಿದ್ದ ತಕ್ಷಣ ಚಾಲಕ ಹಾಗೂ ಕ್ಲೀನರ್ ವಾಹನ ಬಿಟ್ಟು ಪರಾರಿಯಾಗಿದ್ದು, ಬಿದ್ದ ರಭಸಕ್ಕೆ ಒಳಗಿದ್ದ ಒಂದು ಹಸು ಕೆಳಗಿಬಿದ್ದು ಸಾವನ್ನಪ್ಪಿದೆ.
ಉಳಿದ ಮೂರು ಹಸು ಹಾಗೂ ಎರಡು ಕರುಗಳನ್ನ ಗ್ರಾಮಸ್ಥರು ರಕ್ಷಿಸಿದ್ದು ಸ್ಥಳಕ್ಕೆ ಆಗಮಿಸಿದ ಕೆ.ಆರ್ ನಗರ ಪೊಲೀಸರು ವಾಹನವನ್ನ ವಶಕ್ಕೆ ತೆಗೆದುಕೊಂಡು ಪರಾರಿಯಾಗಿರುವ ಹಸು ಕಳ್ಳರಿಗೆ ಭಲೆ ಬೀಸಿದ್ದಾರೆ.