News Kannada
Sunday, February 05 2023

ಮೈಸೂರು

ನಮ್ ರೇಡಿಯೋದಲ್ಲಿ ಉದ್ಯೋಗ ಅವಕಾಶ

Photo Credit :

ನಮ್ ರೇಡಿಯೋದಲ್ಲಿ ಉದ್ಯೋಗ ಅವಕಾಶ

ಮೈಸೂರು: ಪಾಸ್ಟೈಮ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನ ನಮ್ ರೇಡಿಯೋಗೆ ರೇಡಿಯೋ ಜಾಕಿ ಆಗಲು ಇಚ್ಚಿಸುವವರು ಇದೇ ತಿಂಗಳ 28 ಮತ್ತು 30 ರಂದು ಆಯ್ಕೆ ಹಾಗೂ ತರಬೇತಿ ಕಾರ್ಯಗಾರ ನಡೆಸಲಾಗುವುದು ಎಂದು ರೇಡಿಯೋ ಜಾಕಿ ರಾಜು ಮಲ್ಲೇಶ್ವರ ತಿಳಿಸಿದ್ದಾರೆ.

ಇಂದು ಪತ್ರಕರ್ತರ ಭವನದಲ್ಲಿ ಮಾತನಾಡಿ, ಜ.28 ಮತ್ತು 30ರಂದು ಬಸುದೇವ ಸೊಮಾನಿ ಕಾಲೇಜಿನಲ್ಲಿ ಆರ್.ಜೆ. ಕಾರ್ಯಾಗಾರ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ವಯಸ್ಸಿನ ಹಾಗೂ ವಿದ್ಯಾಭ್ಯಾಸದ ಅಭ್ಯಂತರವಿಲ್ಲ, ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಕಾರ್ಯಾಗಾರದಲ್ಲಿ ಧ್ವನಿ ಸಮನ್ವಯತೆ, ಕಾರ್ಯಕ್ರಮ ನಿರೂಪಣೆ, ವಾರ್ತಾ ವಾಚನ ಹಾಗೂ ಕ್ರೀಡಾ ವೀಕ್ಷಕ ವಿವರಣೆಯನ್ನು ಕಲಿಸಲಾಗುವುದು ಎಂದು ತಿಳಿಸಿದರು.

ನಮ್ ರೇಡಿಯೋ ಈಗಾಗಲೇ ಜಾಗತಿಕ ಮಟ್ಟದಲ್ಲಿ ಪ್ರಸಾರ ಕಾರ್ಯ ನಡೆಸುತ್ತಿದ್ದು ಇದಕ್ಕೆ ಸಿಮೀತ ಪರಿಧಿಯಿಲ್ಲ. ಜಗತ್ತಿನ ಎಲ್ಲ ಮೂಲೆಯಲ್ಲಿರುವ ಕನ್ನಡಿಗರನ್ನು ತಲುಪುತ್ತಿದ್ದು ಮೆಚ್ಚುಗೆ ಗಳಿಸಿದೆ. ಹೊರ ದೇಶಗಳಲ್ಲಿ ಕನ್ನಡವನ್ನು ಕೇಳುವ ಸೊಬಗೇ ಬೇರೆ. ಆಸ್ಟೇಲಿಯಾ, ಉಗಾಂಡ, ಆಫ್ರಿಕಾ ದೇಶಗಳಿಂದ ಮೆಚ್ಚುಗೆ ಪ್ರತಿಕ್ರಿಯೆಗಳು ಹರಿದು ಬಂದಿವೆ. ನಮ್ ರೇಡಿಯೋ ಆರಂಭವಾದ 9 ತಿಂಗಳಲ್ಲಿಯೇ 196 ದೇಶಗಳಲ್ಲಿ ಕೇಳುಗರನ್ನು ಹೊಂದಿದ್ದು ವಿಶ್ವದ ಮೂಲೆ ಮೂಲೆಗೂ ಕನ್ನಡವನ್ನು ಪಸರಿಸುತ್ತಿದೆ. ರೇಡಿಯೋ ಜಾಕಿ ಆಗಲು ಇಚ್ಛಿಸುವವರಿಗೆ ಇದೊಂದು ಸುರ್ವಣವಕಾಶ.

ಕ್ಯಾನ್ಸರ್ ನಿಂದ ಮುಕ್ತರಾದವರು, ವಿಕಲಾಂಗ ಚೇತನರು, ಮಂಗಳಮುಖಿಯರು ಆರ್.ಜೆ.ಗಳಾಗಿದ್ದಾರೆ. ಬೆಳಿಗ್ಗೆ 6 ರಿಂದ ರಾತ್ರಿ 12ರವರೆಗೆ ನಿರಂತರ ಕನ್ನಡದ ಕಂಪು ಪಸರಿಸುವುದು ಮಾತ್ರವಲ್ಲದೇ ವಿಶೇಷ ದಿನಗಳಲ್ಲಿ ತುಳು, ಕೊಂಕಣಿ ಹವ್ಯಾಸಿ ಆರ್.ಜೆ.ಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅವನೀಧರ್ ತಿಳಿಸಿದರು. ಸದ್ಯದಲ್ಲೇ ಬಳ್ಳಾರಿ, ಚಿಕ್ಕಮಗಳೂರುಗಳಲ್ಲಿ ಆಯ್ಕೆ ಮತ್ತು ತರಬೇತಿ ಕಾರ್ಯಾಗಾರ ನಡೆಯಲಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಭಾಗವಹಿಸಲಿಚ್ಛಿಸುವವರು ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ದೂರವಾಣಿ ಸಂಖ್ಯೆ: 7338128901 ಅಥವಾ  info@nammradio.com ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಸಂಸ್ಥೆಯ ಮುಖಸ್ಥ ಶಶಾಂಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

See also  ಕಾಲು ಜಾರಿ ಬಾವಿಗೆ ಬಿದ್ದು ರೈತ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು