ನಂಜನಗೂಡು: ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಸುಭಾಸ್ ಚಂದ್ರ ಭೋಸ್ ರವರ 120 ನೇ ಜಯಂತಿಯ ಪ್ರಯುಕ್ತ ನಗರದ ಎಂ.ಜಿ,ಎಸ್, ರಸ್ತೆಯಲ್ಲಿರುವ ಜೀವಧಾರ ಡಯಾಗ್ನಸ್ಟಿಕ್ ಸೆಂಟರ್ ಆವರದಲ್ಲಿ ಮೈಸೂರಿನ ಚಂದ್ರಕಲಾ ರಕ್ತ ನಿಧಿ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಜಿಲ್ಲಾ ಬಿಜೆಪಿ ಯುವ ಮೊರ್ಚಾ ಘಟಕದ ಅಧ್ಯಕ್ಷ ಎಲ್.ಆರ್,ಮಹದೇವಸ್ವಾಮಿ ಮಾತನಾಡಿ, ಸುಭಾಸ್ ಚಂದ್ರ ಬೋಸ್ ಈ ದೇಶ ಕಂಡ ಅಪ್ರತಿಮ, ಧೈರ್ಯವಂತ ಮಹಾನ್ ನಾಯಕ, ಒಂದು ತೊಟ್ಟು ರಕ್ತ ನೀಡಿ ಸ್ವಾತಂತ್ರ್ಯ ಕೊಡಿಸುತ್ತೇನೆಂದು ಹೋರಾಡಿದವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅಂತ್ಯತ ವಿಶಿಷ್ಠ ಪಾತ್ರವಹಸಿದ್ದರು. ಕಾಂಗ್ರೇಸ್ ಬಲಹೀನ ನಾಯಕತ್ವ ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ಬಲ ತುಂಬಿದವರು ಸುಭಾಷ್ ರವರು. ಪ್ರಧಾನಿ ನರೇಂದ್ರ ಮೋದಿಯವರು 2016 ಜನವರಿಯಲ್ಲಿ ಸುಭಾಷ್ ಚಂದ್ರಬೋಸ್ ಜನ್ಮ ದಿನದಂದು ಈ ಸ್ವಾತಂತ್ರ್ಯ ಹೋರಾಟಗಾರನಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ವಶದಲ್ಲಿದ್ದ ವರ್ಗೀಕೃತ ಕಡತಗಳನ್ನು ಬಹಿರಂಗಪಡಿಸುವ ಕೆಲಸಕ್ಕೆ ಚಾಲನೆ ನೀಡಿದರು. ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪಣೀಶ್ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರೀಟೀಷರ ವಿರುಧ್ದ ಹೋರಾಡಿದ ಮಹಾನ್ ನಾಯಕ ಸುಭಾಷ್ ಚಂದ್ರ ಬೋಸ್ ಮಹಭಾರತದಲ್ಲಿ ಕರ್ಣನಿಗೆ ಹೇಗೆ ನಾಯಕನಾಗಲಿಲ್ಲಾವೋ ಅದೇ ರೀತಿ ಸುಭಾಷ್ ಚಂದ್ರ ಬೋಸ್ ಕಾಂಗ್ರೇಸ್ ಪಕ್ಷದ ಪಿತೂರಿಯಿಂದ ಅವರ ಹೆಸರು ಮುಂಚೂಣಿಗೆ ಬರಲಿಲ್ಲ, ಆದರೆ ನೇತಾಜಿ ಎಂಬ ಹೆಸರನ್ನು ಯಾರು ಪಡೆಯಲು ಸಾಧ್ಯವಾಗಿಲ್ಲಾ ಎಂದರು.
ಈ ಶಿಬಿರದಲ್ಲಿ 74 ಮಂದಿ ರಕ್ತಧಾನ ಮಾಡಿದ್ದು, ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷರುಗಳಾದ ಆಶೋಕ್, ಜಯದೇವ್, ಕಾರ್ಯದರ್ಶಿ ವಿಜಯಕುಮಾರ್, ಜಿ.ಪಂ,ಸದಸ್ಯ ಸದಾನಂದ, ಮಾಜಿ ಜಿ.ಪಂ,ಸದಸ್ಯರಾದ ಎಸ್.ಎಂ,ಕೆಂಪಣ್ಣ, ಸಿ.ಚಿಕ್ಕರಂಗನಾಯಕ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ವಿನಯ್ಕುಮಾರ್, ನಂಜನಗೂಡು ಯುವ ಮೋರ್ಚಾ ಘಟಕದ ಅಧ್ಯಕ್ಷ ಸಂಜಯ್ ಶರ್ಮ, ಬಿಜೆಪಿ ಮುಖಂಡರಾದ ಎನ್.ಸಿ,ಬಸವಣ್ಣ, ಶೇಂಬುಪಟೇಲ್, ಕೇಬಲ್ ಸಿದ್ದರಾಜು, ಆಶೋಕಪುರಂ ಸ್ವಾಮಿ, ಮಧುರಾಜ್, ಶಿವಚಂದ್ರ, ಭಾಗ್ಯ, ಕರವೇ ಮಹದೇವ ಪ್ರಸಾದ್, ಎಪಿಎಂಸಿ ಸದಸ್ಯ ಗುರುಸ್ವಾಮಿ, ದೇಬೂರು ಶಿವುಕುಮಾರ್, ಶಂಕರ್, ಶಿವುಮೂರ್ತಿ, ಕಲ್ಮಳ್ಳಿ ನಟರಾಜ್. ಪಧಾಧಿಗಳಾದ ಶ್ರೀಕಂಠ, ಗಜೇಂದ್ರ, ಮಹೀ ಮಹೇಶ್, ಸ್ವಾಮಿ, ಸಿದ್ದರಾಜು, ಇದ್ದರು,