ಮೈಸೂರು: ಕಂಬಳ ವಿಚಾರಕ್ಕೆ ಅಗತ್ಯಬಿದ್ದರೆ ಸುಗ್ರೀವಾಜ್ಞೆ ಹೊರಡಿಸಲ ಸಿದ್ದ, 6ನೇ ತಾರೀಖು ಕೋರ್ಟ್ ನಲ್ಲಿ ವಿಚಾರಣೆ ಇದ್ದು ಕಾದು ನೋಡುತ್ತೇವೆ. ನಂತರ ತೀರ್ಮಾನ ಕೈಗೊಳ್ಳಲಾಗುವುದು ಕಂಬಳಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ಎರಡು ದಿನದ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಂಬಳ ಒಂದು ಗ್ರಾಮೀಣ ಕ್ರೀಡೆ, ನನಗೆ ಅದರ ಬಗ್ಗೆ ವಿರೋಧವಿಲ್ಲ. ಕೋರ್ಟ್ ನಲ್ಲಿ ಕೇಸ್ ಇದೆ ಅಗತ್ಯ ಬಿದ್ದರೆ ಸುಗ್ರಿವಾಜ್ನೆ ಹೊರಡಿಸಲು ಸಿದ್ಧ ಜಲ್ಲಿಕಟ್ಟು – ಕಂಬಳ ಬೇರೆ ಬೇರೆ ಎರಡಕ್ಕೂ ಹೋಲಿಕೆ ಬೇಡ 6 ನೇ ತಾರೀಖು ವಿಚಾರಣೆ ಇದೆ ಕಾದು ನೋಡೋಣಾ ಎಂದರು.
ಡಿಜಿಪಿ ಹುದ್ದೆ ವಿಚಾರ ಹಿರಿಯರು ಯಾರ್ಯಾರು ಇದ್ದಾರೆ ಅದನ್ನ ನೋಡಿಕೊಂಡು ತೀರ್ಮಾನ ಮಾಡಲಾಗುವುದು. ಲೋಕಾಯುಕ್ತ ವಿಶ್ವನಾಥ ಶೆಟ್ಟಿ ನೇಮಕ ವಿಚಾರ ರಾಜ್ಯ ಪಾಲರು ಕೆಲವು ವಿವರಣೆ ಕೇಳಿದ್ದಾರೆ, ಅದನ್ನ ರಾಜ್ಯಪಾಲರಿಗೆ ಸಂಕ್ಷಿಪ್ತವಾಗಿ ವಿವರಣೆ ನೀಡುತ್ತೇವೆ ಎಂದರು. ಇನ್ನೂ ಜೆಡಿಎಸ್ ಮುಂದಿನ ವಿಧಾನ ಸಭಾ ಚುನಾವಣೆಗೆ ಮುಂದಿನ ತಿಂಗಳು ಅಭ್ಯರ್ಥಿಯ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಲಿದೆ ಎಂಬ ಪ್ರಶ್ನೆಗೆ ಗಂರಂ ಆದ ಸಿದ್ದರಾಮಯ್ಯ, ಜೆಡಿಎಸ್ ಗೂ ಕಾಂಗ್ರೆಸ್ ಗೂ ಯಾಕೆ ಹೋಲಿಕೆ ಮಾಡ್ತೀರಾ ಎಂದು ವ್ಯಂಗ್ಯವಾಗಿ ಜೆಡಿಎಸ್ ನಮಗೆ ಲೆಕ್ಕವಿಲ್ಲ ಎಂಬ ರೀತಿಯಲ್ಲಿ ಉತ್ತರ ನೀಡಿದರು.
ನಂಜನಗೂಡು ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಕಳೆಲೇ ಕೇಶವ ಮೂರ್ತಿ ಎಂದು ಘೋಷಣೆ ಮಾಡಿದರಲ್ಲ ಎಂಬ ಪ್ರಶ್ನೆಗೆ ಹೌದ ಎಂದು ಆಶ್ಚರ್ಯವಾಗಿ ಪತ್ರಕರ್ತರಿಗೆ ಪ್ರಶ್ನೆ ಮಾಡಿದ ಸಿಎಂ ನಾವು ಬಿಜೆಪಿ, ಜೆಡಿಎಸ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಚುನಾವಣಾ ಘೋಷಣೆ ಆಗಲಿ ನಂತರ ನಮ್ಮ ಅಭ್ಯರ್ಥಿಯನ್ನ ಘೋಷಣೆ ಮಾಡುತ್ತೇವೆ ಎಂದರು.
ಐಟಿ ದಾಳಿಯ ಬಗ್ಗೆ ಮಾಹಿತಿ ಇಲ್ಲ:
ಸಚಿವರ ಮನೆ ಮೇಲೆ ದಾಳಿ ವಿಚಾರ ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ ಅವರೇ ಮಾಡಿಸಿದ್ದಾರೆ ಎಂಬ ಹೇಳಿಕೆ ಅವರನ್ನೇ ಕೇಳಿಕೊಳ್ಳಿ, ರಮೇಶ್ ಜಾರಕಿಹೊಳಿ ಸಚಿವ ಸಂಪುಟದಲ್ಲಿ ಮುಂದುವರಿಸುವ ವಿಚಾರ ಅದು ಐಟಿ ದಾಳಿಯಷ್ಟೆ ಅದಕ್ಕೂ ಇದಕ್ಕೂ ಸಂಬಂಧ ಏನಿದೆ ಎಂದು ಸಚಿವರವನ್ನ ಸಮರ್ಥಿಸಿಕೊಂಡರು.
ಬಿ.ಎಸ್ ಯಡಿಯೂರಪ್ಪ , ಸಿಎಂಗೆ ಕಾಮನ್ ಸೆನ್ಸ್ ಇಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಅವರಿಗೆ ಕಾಮನ್ ಸೆನ್ಸ್ ಇದೆಯಾ? ಪ್ರಧಾನಿ ಭೇಟಿ ಮಾಡಿ ತಿಂಗಳಾಗಿದೆ. ಸರ್ವ ಪಕ್ಷಗಳ ಸಭೆ ನಡೆಸಿ ತಿಂಗಳಾಗಿದೆ ಬರಕ್ಕೆ ಸಂಬಂಧಿಸಿದಂತೆ ಒಂದು ರೂಪಾಯಿ ಕೊಟ್ಟಿಲ್ಲ ಇಲ್ಲಿ ಮಾತನಾಡುವ ಬದಲು ಕೇಂದ್ರಕ್ಕೆ ಹೋಗಿ ಹಣ ಬಿಡುಗಡೆ ಮಾಡಿಸಿದರೆ ಒಳ್ಳೆಯದು. ಅನಗತ್ಯ ಹೇಳಿಕೆ ನೀಡುವುದನ್ನ ನಿಲ್ಲಿಸಲಿ. ಕಳೆದ ವರ್ಷ ನೀಡಿದ್ದ ಬರ ಹಣವನ್ನ ಒಂದು ಪೈಸೆ ಬಿಡದಂತೆ ರೈತರ ಅಕೌಂಟಿಗೆ ಜಮಾ ಮಾಡಿದ್ದೇವೆ. ಇದನ್ನ ಹೇಳುವವರು ಕಾಮನ್ ಸೆನ್ಸ್ ಇಟ್ಟುಕೊಂಡು ಮಾತನಾಡಬೇಕು ಎಂದರು.
ಸದಾನಂದಗೌಡ ರಾಜ್ಯ ಸರ್ಕಾರ ಸರಿಯಾಗಿ ಫಾಲೋಅಪ್ ಮಾಡಬೇಕೆಂಬ ವಿಚಾರ ಎಷ್ಟು ಸಾರಿ ಫಾಲೋಅಪ್ ಮಾಡಬೇಕು ಸರ್ವ ಪಕ್ಷಗಳ ಸಭೆಯಲ್ಲಿ ಎಲ್ಲರೂ ಇದ್ದರು ರಾಜ್ಯಕ್ಕೆ ಯಾಕೆ ಅನ್ಯಾಯವಾಗಿದೆ. ತಮಿಳುನಾಡಿಗೆ ಸ್ಪಂದಿಸ್ತಾರೆ ಎಂಬ ವಿಚಾರವನ್ನ ಅವರ ಬಳಿಯೇ ಕೇಳಿ ಸದಾನಂದಗೌಡರೇ ಅದರ ಬಗ್ಗೆ ಉತ್ತರ ನೀಡಬೇಕು.