ಮೈಸೂರು: ನನ್ನ ಗಂಡ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರಿಂದ ವಿವಾಹ ವಿಚ್ಚೇದನ ಹಾಗೂ ಜೀವನಾಂಶ ಕೊಡಬೇಕೆಂದು ಪತ್ನಿ ಸವಿತ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಬಿಜೆಪಿಯ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಪತ್ನಿ ಸವಿತ ತನ್ನ ಗಂಡ ಇನ್ನೊಂದು ಹೆಣ್ಣಿನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಅವರ ಹೆಂಡತಿಯಾದ ನನಗೆ ಕೊಡಬೇಕಾದ ಸ್ಥಾನ ಮಾನಗಳನ್ನು ಕೊಡುತ್ತಿಲ್ಲ ಆದ್ದರಿಂದ ಬೇಸತ್ತು ನನ್ನ ಗಂಡನಿಂದ ವಿವಾಹ ವಿಚ್ಚೇದನ ಕೊಡಿಸಿ ಜೀವನಾಂಶಕ್ಕೆ ಪ್ರತಿ ತಿಂಗಳು 1.5 ಲಕ್ಷ ಹಣ ಹಾಗೂ 2.50 ಕೋಟಿ ಆಸ್ತಿಯನ್ನ ಕೊಡಿಸಬೇಕು ಜೊತೆಗೆ ನ್ಯಾಯಾಲಯದ ವೆಚ್ಚಕ್ಕಾಗಿ 5 ಲಕ್ಷ ರೂ ಕೊಡಬೇಕೆಂದು ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಸ್ತುತ ಮೈಸೂರಿನ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.