News Kannada
Friday, December 02 2022

ಮೈಸೂರು

ಅಪರ ಪ್ರಾದೇಶಿಕ ಆಯುಕ್ತರಿಂದ ಸಿನಿಮೋತ್ಸವ ಚಾಲನೆ

Photo Credit :

ಅಪರ ಪ್ರಾದೇಶಿಕ ಆಯುಕ್ತರಿಂದ ಸಿನಿಮೋತ್ಸವ ಚಾಲನೆ

ಮೈಸೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಒಲಂಪಿಯಾ ಚಿತ್ರಮಂದಿರದಲ್ಲಿ ಜನವರಿ 27 ರಿಂದ ಫೆಬ್ರವರಿ 2 ರವರೆಗೆ ಬೆಳಗಿನ ಪ್ರದರ್ಶನದಲ್ಲಿ ಆಯೋಜಿಸಿರುವ ಸಿನಿಮೋತ್ಸವ ಸಪ್ತಾಹಕ್ಕೆ ಅಪರ ಪ್ರಾದೇಶಿಕ ಆಯುಕ್ತರಾದ ಎಸ್.ಜೆ. ಸೋಮಶೇಖರ್ ಅವರು ಚಾಲನೆ ನೀಡಿದರು.

ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಚಲನಚಿತ್ರಗಳು ಜನಸಾಮಾನ್ಯರಿಗೆ ತಲುಪಲಿ ಎಂಬ ಉದ್ದೇಶದಿಂದ ಜನವರಿ 27 ರಿಂದ ಫೆಬ್ರವರಿ 2 ರವರೆಗೆ ಬೆಳಿಗ್ಗೆ 10-30 ಗಂಟೆಗೆ ಒಲಂಪಿಯಾ ಚಿತ್ರಮಂದಿರದಲ್ಲಿ ಉಚಿತವಾಗಿ ಪ್ರದರ್ಶನ ಆಯೋಜಿಸಲಾಗಿದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಚಾಲನೆ ನೀಡಿದ ಸಂದರ್ಭದಲ್ಲಿ ಮೈಸೂರು ಉಪ ವಿಭಾಗಾಧಿಕಾರಿ ಸಿ.ಎಲ್. ಆನಂದ, ಮೈಸೂರು ನಗರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು, ಒಲಂಪಿಯಾ ಚಿತ್ರಮಂದಿರ ಅಧೀಕ್ಷಕ ಕೃಷ್ಣ, ವ್ಯವಸ್ಥಾಪಕ ನಾಗರಾಜು ಉಪಸ್ಥಿತರಿದ್ದರು.

2015ನೇ ಕ್ಯಾಲೆಂಡರ್ ವರ್ಷದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿಗೆ ಭಾಜನವಾಗಿರುವ ಕನ್ನಡದ ಐದು ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಜನವರಿ 27 ರಂದು ಮೈತ್ರಿ, ಜನವರಿ 28 ರಂದು ಶಿವಯೋಗಿ ಶ್ರೀಪುಟ್ಟಯ್ಯಜ್ಜ, ಜನವರಿ 29 ರಂದು ತಿಥಿ, ಜನವರಿ 30 ರಂದು ಕೃಷ್ಣಲೀಲಾ, ಜನವರಿ 31 ರಂದು ರಂಗಿತರಂಗ, ಫೆಬ್ರವರಿ 1 ರಂದು ತಿಥಿ ಹಾಗೂ ಫೆಬ್ರವರಿ 2 ರಂದು ಮೈತ್ರಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಪ್ರವೇಶ ಉಚಿತವಾಗಿರುತ್ತದೆ.

ಮೈತ್ರಿ: ಗಿರಿರಾಜ್ ನಿರ್ದೇಶನದಲ್ಲಿ ಪುನೀತರಾಜ್ ಕುಮಾರ್, ಮೋಹನಲಾಲ್ ತಾರಗಣದ ಮೈತ್ರಿ ಚಿತ್ರ ಪ್ರತಿಭೆಗೆ ಬಡತನವಿಲ್ಲ. ಪ್ರೋತ್ಸಾಹ ಸಿಕ್ಕರೆ ಸಾಧನೆ ಸಾದ್ಯ ಎನ್ನುವ ಕಥಾಹಂದರ ಹೊಂದಿದೆ.

ಶಿವಯೋಗಿ ಶ್ರೀಪುಟ್ಟಯ್ಯಜ್ಜ: ದಿವಂಗತ ಶ್ಯಾಂ ನವಲೆ ನಿರ್ದೇಶನದ ವಿಜಯರಾಘವೇಂದ್ರ ನಟಿಸಿರುವ ಈ ಚಿತ್ರವು ಸಂಗೀತ ಕಲಾ ಪರಾಂಗತ ಎನ್ನಿಸಿದ ಗದಗಿನ ಶ್ರೀ ವೀರೇಶ್ವರ ಪುಣ್ಯ ಆಶ್ರಮದ ಡಾ. ಪಂಡಿತ ಪುಟರಾಜ ಗವಾಯಿಗಳ ಜೀವನಾಧಾರಿತ ಸಿನಿಮಾ.

ತಿಥಿ: ಹೊಸ ನಿರ್ದೇಶಕ ಹೊಸ ಕಲಾವಿದರ ನೂತನ ಕಥೆಯೊಂದಿಗೆ ಹೋಸ ಛಾಪು ಮೂಡಿಸಿದ ತಿಥಿ ಸಿನಿಮಾ ಹಳ್ಳಿಯೊಂದರ ನೆಲೆಗಟ್ಟಿನ ನೈಜ ಸಿನಿಮಾವಾಗಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಕೃಷ್ಣಲೀಲಾ: ಶಶಾಂಕ್ ನಿರ್ದೇಶನದಲ್ಲಿ ಅಜಯ್ ರಾವ್ ನಿರ್ಮಿಸಿ ನಟಿಸಿರುವ ಕೃಷ್ಣಲೀಲಾ ಇಂದಿನ ಅಗತ್ಯಗಳಲ್ಲಿ ಒಂದಾಗಿರುವ ಮೊಬೈಲ್ ಅವಾಂತರದ ಮೂಲಕ ಜೀವನ ಬದಲಾಗುವ ರೀತಿಯನ್ನು ಹೇಳಿರುವ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆ.

ರಂಗಿತರಂಗ: ಕನ್ನಡ ಚಿತ್ರರಂಗದಲ್ಲಿ ಇಂದಿನ ಅದ್ದೂರಿ ಚಿತ್ರಗಳ ಪೈಪೋಟಿ ನಡುವೆ ವರ್ಷ ಪೂರೈಸಿದ ಚಿತ್ರ ರೋಚಕಥೆ ಕುತುಹಲ ಕಂಡುಕೊಂಡು ಪತ್ತೇದಾರಿ ಕಥೆಯ ಜನಮನ್ನಣೆ ಗಳಿಸಿರುವ ಸಿನಿಮಾ ಇದಾಗಿದೆ.

See also  ಸೋದರಮಾವನಿಂದ ಅಳಿಯನ ಬರ್ಬರ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು