ಮೈಸೂರು: ನಾವು ಸಾಧುಗಳು ಲೋಕಾ ಕಲ್ಯಾಣಕ್ಕಾಗಿ ಸೇವೆ ಮಾಡುತಿದ್ದೇವೆ, ಲೋಕಾದ ಮರ್ಯಾದೆಗಾಗಿ ಎರಡು ಬಟ್ಟೆಗಳನ್ನ ಧರಿಸಿದ್ದೇನೆ, ಇಲ್ಲದಿದ್ದರೆ ದಿಗಂಬರರಾಗಿ ಇರುವುದರಲ್ಲಿ ನನಗೆ ಆನಂದವಿದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಐತಿಹಾಸಿಕ ಸುತ್ತೂರು ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯೋಗ ಗುರು ಬಾಬಾ ರಾಮ್ ದೇವ್, ಪ್ರತಿ ನಿತ್ಯ 30 ನಿಮಷಗಳ ಕಾಲ ಯೋಗ ಮಾಡುವುದರಿಂದ ರೋಗ ಮುಕ್ತರಾಗಬಹುದು ಎಂದು ವೇದಿಕೆಯಲ್ಲಿ ಯೋಗದ ವಿವಿಧ ಆಸನಗಳನ್ನ ಮಾಡಿ ತೋರಿಸಿ ಯೋಗದ ಉಪಯೋಗಗಳನ್ನ ತಿಳಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಯೋಗ ಗುರು, ಯೋಗ ಕೇಂದ್ರವನ್ನ ಸುತ್ತೂರು ಶ್ರೀಗಳು ಬೆಂಗಳೂರಿನಲ್ಲಿ ಪ್ರಾರಂಭ ಮಾಡುವಂತೆ ಕೇಳಿದ್ದು, ಎಲ್ಲರೂ ರೋಗ ಮುಕ್ತರಾಗುವ ಯೋಗದ ಕಡೆ ಹೋಗಲು ಸಾಧ್ಯವಾಗುತ್ತದೆ ಎಂದು ಹೇಳಿದ ಬಾಬಾ ರಾಮ್ ದೇವ್, ವಿದೇಶಿ ಕಂಪನಿಗಳು ದೇಶದ ಹಣವನ್ನ ಲೂಟಿ ಮಾಡುತ್ತಿದ್ದು, ದೇಶದ ಸಂಪತ್ತನ್ನ ರಕ್ಷಿಸಲು ಪತಂಜಲಿ ಸ್ವದೇಶಿ ಉತ್ಪನ್ನಗಳನ್ನ ಪ್ರಾರಂಭಿಸಿದ್ದು, ಇದರ ಬರುವ ಆಧಾಯವನ್ನು ಲೋಕಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದೇನೆ. ಇನ್ನೂ ಹತ್ತು ವರ್ಷಗಳಲ್ಲಿ ವಿದೇಶಿ ಕಂಪನಿಗಳನ್ನ ತೆರವುಗೊಳಿಸುತ್ತೇನೆ ಎಂದು ಗುಡುಗಿದರು.
ಜಾತ್ರಾ ಸಮಾರೋಪ ಸಮಾರಂಭ:
ಜನವರಿ 24 ರಿಂದ 29ರವರೆಗೆ ನಡೆದ ಸುತ್ತೂರು ಜಾತ್ರಾ ಮಹೊತ್ಸವದ ಸಮಾರೋಪ ಸಮಾರಂಭದಲ್ಲಿ, ಸಮಾರಂಭ ಅಧ್ಯಕ್ಷತೆಯನ್ನ ವಹಿಸಿದ ಮಾಜಿ ಮುಖ್ಯಮಂತ್ರಿ ಮಾತನಾಡಿ, ಸುತ್ತೂರು ಮಠ ನಮ್ಮ ತಂದೆಗೆ ರಾಜಕೀಯದಲ್ಲಿ ಆರ್ಶೀವಾದ ನೀಡಿದ ಮಠವಾಗಿದ್ದು, ಇದರ ಬಗ್ಗೆ ನಮಗೆ ಅಪಾರವಾದ ಗೌರವಿದ್ದು, ಇದನ್ನ ಉಳಿಸಿಕೊಂಡು ಹೋಗಲು ನಮ್ಮ ತಂದೆ ನಮಗೆ ಹೇಳಿದ್ದಾರೆ. ಅದರಂತೆ ನಾವು ಮುಂದುವರೆಯುತ್ತಿದ್ದೇವೆ ಎಂದ ಅವರು ಇನ್ನೇರೆಡು ತಿಂಗಳಲ್ಲಿ ಸಹಕಾರ ಸಂಘಗಳ ಅಸಲು ಪಾವತಿಸಿದರೆ ಬಡ್ಡಿ ಮನ್ನ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರೈತರ ಬಳಿ ಹಣವೇ ಇಲ್ಲ ಅಸಲು ಕಟ್ಟಲು ಎಲ್ಲಿ ಸಾಧ್ಯ, ಇಂತಹ ಜನ ರಾಜ್ಯ ಸರ್ಕಾರವನ್ನ ಆಳುತ್ತಿದ್ದಾರೆ ಎಂದು ಸಿದ್ದರಾಮಯ್ಯನನ್ನ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಗಳು ಆರ್ಶಿವಚನ ನೀಡಿ ಬಂದಿದ್ದ ಗಣ್ಯರಿಗೆ ಸನ್ಮಾನ ಮಾಡಿದರು.