ಮೈಸೂರು: ಮಹಾರಾಣಿ ಕಾಲೇಜಿನ ಒಳ ಆವರಣದಲ್ಲಿ ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸರ್ವೋದಯ ದಿನಾಚರಣೆ ಮತ್ತು ಗಾಂಧೀಜಿ ಜೀವನ ಪ್ರದರ್ಶನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
ಸೇವೆ ಮಾಡಬೇಕೆಂಬ ಮನಸ್ಸು ಇರುವಲ್ಲಿ ಕೊರತೆಗಳು ಕಾಣಿಸುವುದಿಲ್ಲ. ಇಂದಿನ ಯುವಜನತೆ ಹೆಚ್ಚೆಚ್ಚು ಸೇವಾ ಮನೋಭಾವ ರೂಡಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಲೀಲಾಅಪ್ಪಾಜಿ ಹೇಳಿದರು.
ಗಾಂಧೀಜಿಯವರು ಸಮಾಜಸೇವೆಯನ್ನೇ ಮುಖ್ಯ ಗುರಿಯನ್ನಾಗಿಟ್ಟುಕೊಂಡಿದ್ದರು. ಅವರಿಗೆ ಏನೇ ತೊಂದರೆಗಳು ಎದುರಾದರೂ ಸಮಾಜಸೇವೆಯನ್ನು ಮಾತ್ರ ಅವರು ಎಂದಿಗೂ ಮರೆತಿರಲಿಲ್ಲ. ಸೇವಾ ಮನೋಭಾವವನ್ನೇ ಹೊಂದಿದ್ದ ಅವರು ಯಾರಲ್ಲಿ ಸಮಾಜ ಸೇವೆಯನ್ನು ಮಾಡುವ ಮನಸ್ಸು ಇರುತ್ತದೆಯೋ ಅವರಲ್ಲಿ ಕೊರತೆಗಳು ಕಾಣಲಾರವು ಎಂದು ಹೇಳುತ್ತಿದ್ದುದನ್ನು ಸ್ಮರಿಸಿದರು.
ಧರ್ಮವನ್ನು ದೇವರು ಮಾಡಲಿಲ್ಲ. ಆದರೆ ಆತ ಮನುಷ್ಯನನ್ನು ಸೃಷ್ಠಿಸಿದ. ಕಾಲಚಕ್ರ ಉರುಳಿದಂತೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಏನು ಬೇಕಾದರು ಮಾಡಲು ಮುಂದಾಗಿರುವುದು ಅತ್ಯಂತ ಶೋಚನೀಯ ಸಂಗತಿ ಎಂದರು. ಇತರರ ಒಳತಿಗಾಗಿ ದುಡಿಯುತ್ತಿರುವಾಗಲೇ ತಮ್ಮ ಹಿರಿಮೆಗೆ ಬೆಲೆ ಗೌರವಗಳು ಬರುತ್ತವೆ ಎಂಬ ಅಚಲವಿಶ್ವಾಸವನ್ನು ಹೊಂದಿದ್ದ ಗಾಂಧೀಜಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಅಸಹಕಾರ ಚಳುವಳಿಯನ್ನು ಆರಂಭಿಸಿ ಅದರ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇವರ ಆದರ್ಶಗಳು ಇಂದಿಗೂ ನಮ್ಮೆಲ್ಲರಿಗೂ ಪೂರಕವಾಗಿದ್ದು ಇವರನ್ನು ನೆನಪು ಮಾಡಿಕ್ಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಗಾಂಧೀಜಿ ಅವರ ಕುರಿತ 500ಕ್ಕೂ ಹೆಚ್ಚು ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಹರಾಣಿ ಕಲಾ ಕಾಲೇಜು ಪ್ರಾಚಾರ್ಯ ಬಿ.ಟಿ.ವಿಜಯ್, ಕನ್ನಡ ವಿಭಾಗದ ಮುಖ್ಯಸ್ಥ ಟಿ.ವಿ.ವಸಂತಕುಮಾರ್, ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಹೆಚ್.ಎಂ.ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.