ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನಿರ್ಧಾರವನ್ನ ಬೆಂಬಲಿಸಿ ಅವರ ಬೆಂಬಲಿಗರಾದ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನ ನೀಡಿದ್ದಾರೆ.
ಕಳೆದ 3 ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಡಿ. ಮಾದೇಗೌಡ ಅಲಿಯಾಸ್ ಮನೆ ಮನೆ ಮಾದೇಗೌಡ ಎಸ್.ಎಂ.ಕೃಷ್ಣ ಅವರ ರಾಜೀನಾಮೆ ನಿರ್ಧಾರವನ್ನ ಬೆಂಬಲಿಸಿ ತಾವು ಸಹ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನೀಡುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರಿಗೆ ತಮ್ಮ ಲೆಟರ್ ಹೆಡ್ ನಲ್ಲಿ ರಾಜೀನಾಮೆ ಪತ್ರವನ್ನ ಸಲ್ಲಿಸಿದ್ದಾರೆ.
ಮನೆಮನೆ ಮಾದೇಗೌಡ ಎಂದು ಪ್ರಖ್ಯಾತರಾಗಿದ್ದ ಕುಂಬಾರಕೊಪ್ಪಲಿನ ಡಿ.ಮಾದೇಗೌಡ ಅವರನ್ನ ಎಸ್.ಎಂ ಕೃಷ್ಣ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿದ್ದು, ಅಲ್ಲದೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ ಡಿ.ಮಾದೇಗೌಡ ಕೃಷ್ಣ ಅವರ ಕಟ್ಟಾ ಬೆಂಬಲಿದರಾಗಿದ್ದು ಅವರನ್ನ ಬೆಂಬಲಿಸಲು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾಗಿ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.