ಮೈಸೂರು: ಗ್ರಾಮಸ್ಥರಿಗೆ ಭಯ ಉಂಟು ಮಾಡಿದ್ದ ಚಿರತೆ ಅರಣ್ಯ ಇಲಾಖೆಯವರು ಬೋನಿನಲ್ಲಿ ಸೆರೆಹಿಡಿಯುದರಲ್ಲಿ ಯಶಸ್ವಿಯಾದ ಘಟನೆ ನಂಜನಗೂಡು ತಾಲೂಕು ಹೆಗ್ಗಡಹಳ್ಳಿ ನಡೆದಿದೆ.
ಕಬಿನಿ ಉಪನಾಲೆಯ ನೀರಿನ ಪೈಪ್ ಬಳಿ ಅವಿತುಕೊಂಡಿದ್ದ ಚಿರತೆಯನ್ನು ಉಪಾಯ ಮಾಡಿ ತೂಬಿನ ಒಂದು ದ್ವಾರದ ಬಳಿ ಬೋನು ಇರಿಸಿ ಮತ್ತೊಂದು ಬದಿಯಿಂದ ಹೊಗೆ ಹಾಕಿದರು. ಇದರಿಂದ ವಿಚಲಿತವಾದ ಚಿರತೆ ಆಚೆ ಬರಲು ಪ್ರಯತ್ನಪಟ್ಟು ಬೋನಿಗೆ ಬಿದ್ದು ಸೆರೆಯಾಯಿತು.
ಪುಂಡ ಚಿರತೆ:
ಕಳೆದ ಒಂದು ತಿಂಗಳಿನಿಂದ ಗ್ರಾಮದೊಳಗೆ ಓಡಾಡುತ್ತ ಗ್ರಾಮದಲ್ಲರಿವ ಬೀದಿ ನಾಯಿಗಳನ್ನ ಹಿಡಿದು ತಿನ್ನುತಿತ್ತು. ಜೊತೆಗ ಜಾನುವಾರುಗಳ ಮೇಲೆ ದಾಳಿ ಮಾಡಿತು. ಇದರಿಂದ ಬೇಸತ್ತ ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿ ಹಾಗೂ ಸುತ್ತಮುತಲ ಗ್ರಾಮಸ್ಥರು ಚಿರತೆಯನ್ನ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಕಬಿನಿ ಹಿನ್ನರಿನ ಕಾಲುವೆ ಪೈಪ್ ನಲ್ಲಿ ಅವಿತು ಕುಳಿತಿತ್ತು. ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ತಕ್ಷಣ ಕಾರ್ಯಚರಣೆ ಕೈಗೊಂಡ ಅರಣ್ಯ ಇಲಾಖೆಯವರು ಪೈಪ್ ನಲ್ಲಿ ಅವಿತಿದ್ದ ಚಿರತೆಗೆ ಒಂದು ಬದಿಗೆ ಬೊನಿರಿಸಿ ಮತ್ತೊಂದು ಬದಿಯಿಂದ ಹೊಗೆ ಹಾಕಿದಾಗ, ಗಾಬರಿಯಿಂದ ಚಿರತೆ ಬೋನಿಗೆ ಸೆರೆಯಾಯಿತು.