ಮೈಸೂರು: ಕ್ಯಾಂಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಹೆಚ್.ಡಿ.ಕೋಟೆ-ಹುಣಸೂರು ರಸ್ತೆಯ ಬೋಚಿಕಟ್ಟೆ ದೇವಸ್ಥಾನದ ಕ್ರಾಸ್ ಬಳಿ ನಡೆದಿದೆ.
ಮೃತ ಪಟ್ಟವರು ಹೆಚ್.ಡಿ ಕೋಟೆ ತಾಲ್ಲೂಕಿನ ಎಡೆತೊರೆ ಪಾಳ್ಯದ ನಿವಾಸಿ ಶ್ರೀನಿವಾಸ್(35), ಉಮಾ(30), ಮತ್ತು ಚೈತ್ರ(10). ಇವರು ತಮ್ಮ ಊರಿನಿಂದ ಹೆಚ್.ಡಿ ಕೋಟೆಯಲ್ಲಿ ನಡೆಯುವ ಮಂಗಳವಾರದ ವಾರದ ಸಂತೆಗಾಗಿ ಹೆಚ್.ಡಿ ಕೋಟೆಗೆ ಬರುತ್ತಿದ್ದು ಹೆಚ್.ಡಿ ಕೋಟೆ ಕಡೆಯಿಂದ ವೇಗವಾಗಿ ಬರುತ್ತಿದ್ದ ಟ್ಯಾಂಕರ್ ಬೋಚಿಕಟ್ಟೆ ದೇವಸ್ಥಾನದ ತಿರುವಿನಲ್ಲಿ ವೇಗವಾಗಿ ಬಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬ ಮೂವರು ಸ್ಥಳದಲ್ಲೇ ಸಾವ್ನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹೆಚ್.ಡಿ ಕೋಟೆ ಪೊಲೀಸರು ಸ್ಥಳದಲ್ಲಿ ಉದ್ರಗ್ದಾರದ ಜನರನ್ನ ಸಮಾಧಾನ ಪಡಿಸಿ ಕ್ಯಾಂಟರ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.