News Kannada
Monday, December 05 2022

ಮೈಸೂರು

ಬನ್ನೂರಲ್ಲಿ ತಾಯಿ ಮಗಳು ನೇಣಿಗೆ ಶರಣು

Photo Credit :

ಬನ್ನೂರಲ್ಲಿ ತಾಯಿ ಮಗಳು ನೇಣಿಗೆ ಶರಣು

ಮೈಸೂರು: ಗೃಹಿಣಿಯೊಬ್ಬರು ಮಗುವಿನೊಂದಿಗೆ ನೇಣಿಗೆ ಶರಣಾದ ಘಟನೆ ಬನ್ನೂರು ಸಮೀಪದ ಚಾಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದ್ದು, ಸಾವಿನ ಸುತ್ತ ಅನುಮಾನ ಹುತ್ತ ಬೆಳೆದಿದೆ.

ಮೂಲತಃ ಕೆ.ಆರ್.ನಗರದ ಮೇಲೂರಿನವರಾದ ಉದ್ಯೋಗ ನಿಮಿತ್ತ ಬನ್ನೂರಿನ ಚಾಮನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ದೇವರಾಜೇಗೌಡ ಎಂಬುವರ ಪತ್ನಿ ಭವ್ಯ ಮತ್ತು ಮಗು ನೇಣಿಗೆ ಶರಣಾದ ದುರ್ದೈವಿಗಳು. ದೇವರಾಜೇಗೌಡ ಬನ್ನೂರಿನ ವಿವೇಕಾನಂದ ಸಂಸ್ಥೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾಗಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿಯೇ ಪತ್ನಿ ಭವ್ಯ ಸಹ ಆಂಗ್ಲ ಮಾಧ್ಯಮದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಮಂಗಳವಾರ ದೇವರಾಜೇಗೌಡ ಶಾಲೆಗೆ ಹೋಗಿದ್ದ ವೇಳೆಯಲ್ಲಿ ಪತ್ನಿ ಮತ್ತು ಮಗು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಭವ್ಯಳನ್ನು ಸುಮಾರು 5 ವರ್ಷದ ಹಿಂದೆ ಕೆ.ಆರ್.ಪೇಟೆ ಬಂಡಿಹೊಳೆಯಿಂದ ಕೆ.ಆರ್. ನಗರ ಮಾಲೂರಿನ ದೇವರಾಜೇಗೌಡನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ವಿವಾಹದ ಸಂದರ್ಭದಲ್ಲಿ 200ಗ್ರಾಂ ಚಿನ್ನ, 5ಲಕ್ಷ ವರದಕ್ಷಿಣೆ, ಒಂದು ದ್ವಿಚಕ್ರ ವಾಹನ ಕೊಡಲಾಗಿತ್ತು ಎನ್ನಲಾಗಿದೆ. ಮದುವೆ ಸಂದರ್ಭದಲ್ಲಿ 50 ಗ್ರಾಂ ಕಡಿಮೆ ಚಿನ್ನ ನೀಡಿದ್ದಾರೆ ಎಂದು ಪ್ರತಿದಿನ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಹಲವಾರು ಬಾರಿ ಈ ವಿಚಾರ ಕುರಿತಂತೆ ಪಂಚಾಯಿತಿಗಳು ನಡೆದು ಸಂಸಾರ ನಡೆಯುತ್ತಿತ್ತು ಎಂದು ಹೇಳಲಾಗಿದೆ.

ದೇವರಾಜೇಗೌಡ ಭವ್ಯಳ ಮೇಲೆ ಹಲ್ಲೆ ನಡೆಸಿದ್ದು,  ಹೆಂಡತಿ ಮತ್ತು ಮಗಳನ್ನು ಮನೆಯಿಂದ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಹೊರಗೆ ದಬ್ಬಿ ದಬ್ಬಾಳಿಕೆ ನಡೆಸಿದ್ದಾರೆ ಎಂದು ಮೃತಳ ತವರು ಮನೆಯವರು ಆರೋಪಿಸಿದ್ದಾರೆ. ಇದು ಸಾಲದು ಎಂಬಂತೆ ಉರಿಯುತ್ತಿದ್ದ ಗ್ಯಾಸ್ ಒಲೆಗೆ ತನ್ನ ಪತ್ನಿಯ ಮುಖವನ್ನು ಹಿಡಿದು ಸುಡಲೆತ್ನಿಸಿದ್ದಾನೆ. ನಂತರ ಈಕೆ ಚೀರಿದ ಶಬ್ದ ಹೊರಗೆ ಕೇಳಲಾಗಿ, ಆತನ ಕೈಯಿಂದ ತಪ್ಪಿಸಿಕೊಂಡು ಬಂದು ಹೊರಗೆ ಕುಳಿತಿದ್ದಾಳೆ. ಈ ಎಲ್ಲಾ ವಿಚಾರವನ್ನು ಪೋನ್ ಮೂಲಕ ನಮಗೆ ತಿಳಿಸಿದ್ದು ನಾವು ಬರುವಷ್ಟರಲ್ಲಿ ಅನಾಹುತ ನಡೆದು ಹೋಗಿದೆ ಎಂದು ಆರೋಪಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜನರು ದೇವರಾಜೇಗೌಡನ ಮೇಲೆ ಹಲ್ಲೆ ನಡೆಸಿದ್ದು ನಂತರ ಹೇಗೊ ಆತ ಪೊಲೀಸ್ ರಕ್ಷಣೆಯಲ್ಲಿ ಆತನನ್ನು ಠಾಣೆ ಸೇರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತಿ ದೇವರಾಜೇಗೌಡರನ್ನು ಬನ್ನೂರು ಠಾಣಾ ಪೋಲಿಸರು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

See also  ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾಕ್ಕೆ ವಿದ್ಯುಕ್ತ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು