ಮೈಸೂರು: ನಂಜನಗೂಡಿನ ಜೆಡಿಎಸ್ ನ ಮುಖಂಡ ಕಳಲೇ ಕೇಶವಮೂರ್ತಿ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರ ಮೈಸೂರಿನ ವಿಜನಗರದಲ್ಲಿರುವ ಮನೆಗೆ ಭೇಟಿ ನೀಡಿ ಗುಪ್ತವಾಗಿ ಮಾತುಕತೆ ನಡೆಸಿದ್ದು ಈಗ ಕೂತುಹಲಕ್ಕೆ ಕಾರಣವಾಗಿದ್ದು ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿಯಷ್ಟೆ ಬಾಕಿ.
ನಂಜನಗೂಡು ಜೆಡಿಎಸ್ ಅಭ್ಯರ್ಥಿ ಹಾಗೂ ಮುಖಂಡ ಕಳಲೇ ಕೇಶವಮೂರ್ತಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೇ ಮಾಡುವುದು ಖಚಿತವಾದ ಹಿನ್ನಲ್ಲೆಯಲ್ಲಿ ಕಳೆದ ಸೋಮವಾರ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರನ್ನ ಭೇಟಿ ಮಾಡಿ ಮಾತು ಕತೆ ನಡೆಸಿದ್ದು, ಇಂದು ಮೈಸೂರಿನ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರ ಮೈಸೂರಿನ ವಿಜನಗರದಲ್ಲಿರುವ ನಿವಾಸಕ್ಕೆ 11 ಗಂಟೆಗೆ ಬೇಟಿ ಮಾಡಿದ ಕಳಲೇ ಕೇಶವ ಮೂರ್ತಿ ಮಾತು ಕತೆ ನಡೆಸಿದ್ದಾರೆ.
ಸಿಎಂ ಸೂಚನಯ ಮೇರೆಗೆ ಭೇಟಿ:
ಕಳೆದ ಸೋಮವಾರ ಬೆಂಗಳೂರಿನಲ್ಲಿ ಸಿಎಂ ಬೇಟಿ ಮಾಡಿದ ಕೇಶವಮೂರ್ತಿ ಹಾಗೂ ಅವರ ಬೆಂಬಲಿಗರು, ಸಿಎಂ ಜೊತೆ ಮಾತುಕತೆ ನಡೆಸಿದ ನಂತರ ಸಿಎಂ ನೀವು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರನ್ನ ಭೇಟಿ ಮಾಡುವಂತೆ ಸೂಚಿಸಿದ್ದು, ಕಾರಣವೇನೆಂದರೆ ಮಹದೇವಪ್ಪ ಅವರ ಮಗ ಸುನೀಲ್ ಬೋಸ್ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದು, ಆದರೆ ಸಿಎಂಗೆ ಕಳಲೇ ಕೇಶವಮೂರ್ತಿಯನ್ನ ಸೂಕ್ತ ಅಭ್ಯರ್ಥಿ ಎಂಬ ಹಿನ್ನಲ್ಲೆಯಲ್ಲಿ ಮಹದೇವಪ್ಪ ಬೇಸರಗೊಳ್ಳುವ ಸಾಧ್ಯತೆ ಇರುವುದರಿಂದ ಅವರನ್ನ ಭೇಟಿ ಮಾಡುವಂತೆ ಸಿಎಂ ಸೂಚಿಸಿದ ಹಿನ್ನಲ್ಲೆಯಲ್ಲಿ ಇಂದು ಕೇಶವಮೂರ್ತಿ ಉಸ್ತುವಾರಿ ಸಚಿವರನ್ನ ಬೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮಂಗಳವಾರ ಕಾರ್ಯಕರ್ತರ ಸಭೆ:
ಮುಂದಿನ ಮಂಗಳವಾರ ನಂಜನಗೂಡಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಂಜನಗೂಡು ಜೆಡಿಎಸ್ ಸ್ಥಳೀಯ ಮುಖಂಡರು ಹಾಗೂ ನಗರಸಭಾ ಸದಸ್ಯರ ಸಭೆ ಕರೆದಿದ್ದು, ಸಭೆಯಲ್ಲಿ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಚೆರ್ಚೆ ಮಾಡಿ ನಂತರ ಬುಧವಾರ ಅಥವಾ ಗುರುವಾರ ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಸಿಎಂ ಸಮ್ಮುಖದಲ್ಲಿ 9 ನಗರಸಭಾ ಜೆಡಿಎಸ್ ಸದಸ್ಯರ ಜೊತೆ ಕಾಂಗ್ರೆಸ್ ಸೇರ್ಪಡೆಗೆ ತೀರ್ಮಾನಿಸಲಾಗಿದೆ ಎಂದು ಆಪ್ತ ವಲಯಗಳು ಖಚಿತ ಪಡಿಸಿವೆ.