ಮೈಸೂರು: 2017-18ನೇ ಕೇಂದ್ರ ಬಜೆಟ್ ಅಭಿವೃದ್ದಿಯ ಪರವಾಗಿಯೇ ಇಲ್ಲ, ಯಾವುದೇ ಹೊಸ ಉದ್ಯೋಗ ಅವಕಾಶಗಳನ್ನ ಸೃಷ್ಟಿ ಮಾಡದೆ ಕೇವಲ ಇನಕ್ರಿಮೆಂಟಲ್ ಬಜೆಟ್ ಆಗಿದೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕೇಂದ್ರ ಬಜೆಟ್ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ತುರ್ತು ಪತ್ರಿಕಾಗೋಷ್ಟಿ ಕರೆದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ 2017-18ನೇ ಬಜೆಟ್ ಸಾಮಾನ್ಯ ಬಜೆಟ್ ಹಾಗೂ ರೈಲ್ವೆ ಬಜೆಟ್ ಒಂದೇ ಬಜೆಟ್ ಮಂಡನೆ ಮಾಡಿದ್ದು ದೇಶದ ಜನರ ಬಾರಿ ನಿರೀಕ್ಷೆಗಳನ್ನ ಇಟ್ಟುಕೊಂಡಿದರು. ಆದರೆ ಇದಕ್ಕೆ ಪೂರಕವಾದ ನಿರ್ಧಿಷ್ಟ ಯೋಜನೆಗಳನ್ನ ಘೋಷಣೆ ಮಾಡಿಲ್ಲ. ಇದರಿಂದ ದೊಡ್ಡ ನೋಟುಗಳ ಅಮಾನ್ಯ ಮಾಡಿದ ನಂತರ ಆದಾಯ ಹೆಚ್ಚಾಗುತ್ತದೆ, ದುರ್ಬಲರು, ಬಡವರಿಗೆ ಹೊಸ ಯೋಜನೆಗಳು ಘೋಷಣೆಯಾಗುತ್ತವೆ, ಬಜೆಟ್ ಅಭಿವೃದ್ದಿ ಪೂರಕವಾಗಿರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಯಾವುದೇ ಅಭಿವೃದ್ದಿ ಪೂರಕ ಹಾಗೂ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗದೆ ಅಭಿವೃದ್ದಿಗೆ ಪೂರಕವಾದ ಯಾವುದೇ ಅಂಶಗಳಿರದೆ, ಕೇವಲ 2017-18ನೇ ಬಜೆಟ್ ಇನ್ ಕ್ರಿಮೆಂಟಲ್ ಬಜೆಟ್ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರದ ಬಜೆಟ್ ಬಗ್ಗೆ ವಾಗ್ದಾಳಿ ನಡೆಸಿದರು.ಕೇಂದ್ರ ಬಜೆಟ್ ನಲ್ಲಿ ಕೃಷಿಗೆ ಅಷ್ಟೇನೂ ಆಧ್ಯತೆ ನೀಡಿಲ್ಲ. ಬರಗಾಲ ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಯಾವುದೇ ಯೋಜನೆ ಇಲ್ಲ. ಸಾಲ ಮನ್ನಾ ಬಗ್ಗೆ ಬಜೆಟ್ ನಲ್ಲಿ ಯಾವುದೇ ಯೋಜನೆ ಇಲ್ಲ. ಕೇಂದ್ರ ಸರ್ಕಾರ ಬರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಗುಜರಾತ್, ಮಹಾರಾಷ್ಟ್ರ,ತಮಿಳುನಾಡಿಗೆ ಹೊಲಿಸಿದ್ರೆ ಬರದ ವಿಷ್ಯದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.
ನರೇಂದ್ರ ಮೋದಿ ಅಚ್ಚೆ ದಿನ್ ಆಗಯಾ ಅಂತಿದ್ರು. ಆದ್ರೆ ಅಚ್ಚೆ ದಿನ್ ನಹಿ ಆ ಗಯಾ ಎಂದು ಲೇವಡಿ ಮಾಡಿದ ಸಿಎಂ ಗ್ರಾಮ ಸಡಕ್ ಯೋಜನೆ, ರಾಷ್ಟೀಯ ಹೆದ್ದಾರಿ ಯೋಜನೆ, ಮೆಟ್ರೋ ಯೋಜನೆ ರಾಜ್ಯದ ರೈಲ್ವೆ ಅಭಿವೃದ್ದಿಗೆ ಕೇಂದ್ರ ಬಜೆಟ್ ರಾಜ್ಯಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುವ ಯೋಜನೆಗಳನ್ನ ನೀಡಿಲ್ಲ, ಜೊತೆಗೆ ಹೆಚ್ಚಿನ ಹಣ ಸಹ ನೀಡಿಲ್ಲ.
ಆದಾಯ ವೃದ್ದಿ ಹಿಂದೆಯೂ ಸಹ ಶೇ 17 ಇತ್ತು, ಈ ವರ್ಷವೂ ಶೇ 17 ರಷ್ಟಿದೆ. ಇದರಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲ ಎಂದು ಹೇಳಿದ ಸಿಎಂ ಇನ್ನೂ ರಾಜಕೀಯ ಪಕ್ಷಗಳು ದೇಣಿಗೆಯನ್ನ 20 ಸಾವಿರದಿಂದ 2 ಸಾವಿರಕ್ಕೆ ಇಳಿಸಿರುವುದು ಅದನ್ನು ಸಹ ಚೆಕ್ ಅಥವಾ ಡಿಡಿ ರೂಪದಲ್ಲಿ ಪಡೆಯಲು ಬಜೆಟ್ ನಲ್ಲಿ ಘೋಷಣೆ ಮಾಡಿರುವುದನ್ನ ವ್ಯಂಗ್ಯವಾಗಿ ಮಾತನಾಡಿದರು.
ಕರ್ನಾಟಕಕ್ಕೆ ಈ ಬಾರಿಯ ಕೇಂದ್ರ ಬಜೆಟ್ ನಿರಾಷದಯಾಕವಾಗಿದ್ದು, ಕರ್ನಾಟಕಕ್ಕೆ ಯಾವುದೇ ಹೊಸ ಯೋಜನೆಗಳನ್ನ ಘೋಷಣೆ ಮಾಡದೆ ಬರಕ್ಕೆ ಪರಿಹಾರ ನೀಡದೆ ಹಿಂದಿನ ಯುಪಿಎ ಸರ್ಕಾರದ ಯೋಜನೆಗಳಿಗೆ ಬೇರೆ ಹೆಸರಿನಲ್ಲಿ ಘೋಷಣೆ ಮಾಡುವ ಮೂಲಕ ಯಾವುದೇ ಹೊಸ ಯೋಜನೆಗಳನ್ನ ತರದೆ ಇದೊಂದ ನಿರಾಷದಯಾಕ ಬಜೆಟ್ ಎಂದು ಸಿಎಂ ವಾಗ್ದಾಳಿ ನಡೆಸಿದರು.