ಮೈಸೂರು: ತೀರ್ಥಯಾತ್ರೆಗೆಂದು ವೈಷ್ಣೋದೇವಿಗೆ ತೆರಳಿದ ತಂದೆ ಅನಾರೋಗ್ಯದಿಂದ ಅಲ್ಲಿಯೇ ಮೃತ ಪಟ್ಟಿದ್ದಾರೆ ಎಂಬ ತಂದೆ ಸಾವಿನ ಸುದ್ದಿ ತಿಳಿದ ಮಗನು ಹೃದಯಘಾತದಿಂದ ಸಾವ್ನಪ್ಪಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.
ಮೃತಪಟ್ಟ ತಂದೆ ಕೆ.ಮಾದಶೆಟ್ಟಿ(84), ಇವರು ಕಳೆದ 10 ದಿನಗಳ ಹಿಂದೆ ಭಾರತದ ತೀರ್ಥಯಾತ್ರೆಗಳ ಪ್ರವಾಸಕ್ಕಾಗಿ ಹೊರಟ್ಟಿದರು, ಗುರುವಾರ ಸಂಜೆ ವೈಷ್ಣೋದೇವಿಯ ದರ್ಶನ ಪಡೆದು ಹಿಂತಿರುಗುವಾಗ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಆತನನ್ನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮಾದಶೆಟ್ಟಿ ಮೃತಪಟ್ಟರು.
ಈ ವಿಚಾರವನ್ನ ನಂಜನಗೂಡುನಲ್ಲಿರುವ ಮಗ ಅರುಣಕುಮಾರ್ (43) ಅವರಿಗೆ ನಿನ್ನೆ ಮಧ್ಯಾಹ್ನ ತಂದೆ ಮೃತಪಟ್ಟಿರುವ ವಿಚಾರ ತಿಳಿಸಿದರು. ವಿಚಾರ ಕೇಳಿದ ತಕ್ಷಣ ಹೃದಾಯಘಾತಗೊಳಗಾದ ಮಗನನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸಾವ್ನಪ್ಪಿದ್ದಾರೆ. ತಂದೆಯ ಶವ ದೆಹಲಿಯಿಂದ ವಿಮಾನದ ಮೂಲಕ ರಾತ್ರಿ ಬೆಂಗಳೂರಿಗೆ ಬಂದು ಇಂದು ಬೆಳಗ್ಗೆ ನಂಜನಗೂಡಿಗೆ ಆಗಮಿಸಿದ್ದು, ತಂದೆ ಮಗನ ಅಂತ್ಯಕ್ರಿಯೆಯನ್ನ ಜೊತೆಯಾಗಿ ನಡೆಸಲು ಕುಟುಂಬಸ್ಥರು ಸಿದ್ದತೆ ನಡೆಸಿದ್ದಾರೆ.