ಮೈಸೂರು: 64 ಬಾರಿ ಸಂಚಾರ ನಿಯಮವನ್ನ ಉಲ್ಲಂಘಿಸಿ ದಂಡಕ್ಕೆ ಹೆದರಿ ದ್ವಿಚಕ್ರವಾಹನದ ನಂಬರ್ ಪ್ಲೇಟ್ ತೆಗೆದು ಓಡಾಡುತಿದ್ದ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ಕೊನೆಗೂ ನಗರದ ದೇವರಾಜ ಸಂಚಾರಿ ಠಾಣಾ ಪೊಲೀಸರಿಗೆ ಸಿಕ್ಕಿ ಬಿದಿದ್ದಾಳೆ. ಸಿಕ್ಕಿಬಿದಿದ್ದೇಗೆ ಎಂಬುದಕ್ಕೆ ಈ ಸುದ್ದಿ ಓದಿ…
ನಗರದ ಕೆ.ಆರ್ ಮೊಹಲ್ಲಾದ ಗಾಯತ್ರಿ ಎಂಬುವರ ಹೆಸರಿನಲ್ಲಿ ನೊಂದಣಿಯಾಗಿರುವ ದ್ವಿಚಕ್ರ ವಾಹನವನ್ನ ಚಾಲನಾ ಪರವಾನಗಿ ಪಡೆಯದ ನಗರದ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಓಡಾಡುತ್ತಿದ್ದು, ಹೆಲ್ಮೆಟ್ ಧರಿಸದೆ ಜೊತೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಮೂರು ನಾಲ್ಕು ವಿದ್ಯಾರ್ಥಿಗಳನ್ನ ಕುರಿಸಿ ಕೊಂಡು ತ್ರಿಬಲ್ ರೈಡಿಂಗ್ ಮಾವ ಸಂಧರ್ಭದಲ್ಲಿ ಸಂಚಾರಿ ಪೊಲೀಸರ ಕ್ಯಾಮರಾದಲ್ಲಿ ಸಿಕ್ಕಿ ಬಿದಿದ್ದು ಈ ದ್ವಿಚಕ್ರ ವಾಹನದ ಮೇಲೆ 64 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಕಲಾಗಿದ್ದು, ಇದಕ್ಕೆ 9500 ದಂಡ ಕಟ್ಟುವಂತೆ ಸಂಚಾರಿ ಠಾಣೆಯಿಂದ ನೋಟಿಸ್ ಮನೆಗೆ ಹೋಗಿದೆ.
ಇದರಿಂದ ಮನೆಯಲ್ಲಿ ತಂದೆ ತಾಯಿ ಬುದ್ದಿ ಹೇಳಿದಾಗ ವಿದ್ಯಾರ್ಥಿನಿ ದಂಡ ಕಟ್ಟದೆ ದ್ವಿಚಕ್ರವಾಹನದ ನಂಬರ್ ಪ್ಲೇಟ್ ತೆಗೆದು ಡಿಕ್ಕಿಯಲ್ಲಿಟ್ಟು ಹೊಸ ದ್ವಿಚಕ್ರ ವಾಹನ ಎಂದು ಓಡಾಡುತ್ತಿದ್ದಳು.
ಸಿಕ್ಕಿ ಬಿದಿದ್ದೇಗೆ? : ನಗರದ ಮೆಟ್ರೋಪೊಲೋ ವೃತ್ತ ದಾಸಪ್ಪ ವೃತ್ತದ ಕಡೆ ಬರುತ್ತಿದ್ದ ದ್ವಿಚಕ್ರವಾಹನವನ್ನ ಹಿಡಿದು ಸಂಚಾರಿ ಪೊಲೀಸರು ಪರಿಶೀಲಿಸಿದಾಗ, ವಿದ್ಯಾರ್ಥಿನಿ ಹೊಸ ದ್ವಿಚಕ್ರ ವಾಹನ ಎಂದು ಸಬೂಬು ಹೇಳಿದ್ದಾಳೆ. ಇದರಿಂದ ಅನುಮಾನಗೊಂಡ ಸಂಚಾರಿ ಪೊಲೀಸರು ದ್ವಿಚಕ್ರ ವಾಹನದ ಮೀಟರ್ ಪರಿಕ್ಷೀಸಿದಾಗ 7 ಸಾವಿರ ಕಿ.ಮಿಗೂ ಹೆಚ್ಚು ಕಿ.ಮೀ ಓಡಿರುವುದು ಗೊತ್ತಾಗಿದೆ. ಈ ಸಂಭಂದ ವಿದ್ಯಾರ್ಥಿನಿ ಹಾಗೂ ಬೈಕ್ ನ್ನು ದೇವರಾಜ ಠಾಣೆಗೆ ತಂದು ವಿಚಾರಣೆ ನಡೆಸಿದಾಗ ನಿಜಾಂಶವನ್ನ ವಿದ್ಯಾರ್ಥಿನಿ ಒಪ್ಪಿಕೊಂಡಿದ್ದಾಳೆ.
ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆದು ಪೋಷಕರನ್ನ ಕರೆದುಕೊಂಡು ಬರುವಂತೆ ವಿದ್ಯಾರ್ಥಿನಿಗೆ ತಿಳಿಸಿದ್ದು ಈ ಸಂಬಂದ ದೇವರಾಜ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.