ಚಿಕ್ಕಮಗಳೂರು: ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಗರದ ಕುವೆಂಪು ಕಲಾಮಂದಿರದಲ್ಲಿರುವ ಕುವೆಂಪು ಕಲಾಗ್ಯಾಲರಿಯಲ್ಲಿ ಜನಪದಕಲೆಯ ಪ್ರಕಾರಗಳೊಲ್ಲೊಂದಾದ ತೊಗಲುಬೊಂಬೆ ಚಿತ್ರಕಲಾ ಪ್ರದರ್ಶನವನ್ನು ನಡೆಸಿದರು.
ಈ ಚಿತ್ರಕಲಾ ಪ್ರದರ್ಶನವನ್ನು ಖ್ಯಾತ ಪ್ರವೀಣ್ ಗೂಡ್ಕಿಂಡಿ ಉದ್ಘಾಟಿಸಿದರು. ಕಲಾಪ್ರದರ್ಶನದಲ್ಲಿ ಸುಮಾರು 40ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿದ್ದು ಇದು ಫೆ.10 ರವರೆಗೆ ಕಲಾಸಕ್ತರ ವೀಕ್ಷಣೆಗೆ ತೆರೆಯಲಾಗಿದೆ. ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್, ಸಾಂಸ್ಕೃತಿಕ ಸಂಘದ ರವೀಶ್ ಕ್ಯಾತನಬೀಡು, ಉಜ್ವಲ್ ಪಡುಬಿದ್ರಿ, ದೇವರಾಜು, ವಿಶ್ವಕರ್ಮ ಆಚಾಯ, ತೊಗಲುಬೊಂಬೆ ಕಲಾವಿದರು ಮತ್ತಿತರರಿದ್ದರು.