ಮೈಸೂರು: ತಿರುಚಿಯಿಂದ ಬರುತ್ತಿದ್ದ ರಾಜಹಂಸ ಬಸ್ ತಿರುವಿನಲ್ಲಿ ಅಕ್ಸಲ್ ಕಟ್ ಆಗಿ ನಿಯಂತ್ರಣಕ್ಕೆ ಬರದೆ ಪಲ್ಟಿ ಹೊಡೆದು 35ಕ್ಕೂ ಹೆಚ್ಚು ಜನರಿಗೆ ಗಾಯಗೊಂಡು ಇಬ್ಬರ ಕೈ ಕಟ್ಟಾಗಿರುವ ಘಟನೆ ಮುಂಜಾನೆ ನಂಜನಗೂಡಿನ ಗೋಳುರಿನ ತಿರುವಿನಲ್ಲಿ ನಡೆದಿದೆ.
ಸೋಮವಾರ ರಾತ್ರಿ ತಿರುಚಿಯಿಂದ ಹೊರಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಘಟಕಕ್ಕೆ ಸೇರಿದ ರಾಜಹಂಸ ಬಸ್ ಮಂಗಳವಾರ ಬೆಳಿಗಿನ ಜಾವ ಡ್ರೈವರ್ ನಿದ್ದೆ ಬಂದ ಕಾರಣ ಕಂಡಕ್ಟರ್ ಬಸ್ ಚಲಾಯಿಸುತ್ತಿದ್ದು ರಾಜಹಂಸ ಬಸ್ ಸುಮಾರು 5 ಗಂಟೆಗೆ ನಂಜನಗೂಡಿನ ಗೊಳೂರು ತಿರುವಿನಲ್ಲಿ ಅಧಿಕ ವೇಗವಾಗಿ ಬಂದ ಪರಿಣಾಮ ಆಕ್ಸಲ್ ಕಟ್ ಆಗಿ ವೇಗ ನಿಯಂತ್ರಣಕ್ಕೆ ಬಾರದೆ ಪಲ್ಟಿ ಹೊಡೆದು ರಸ್ತೆಯ ಪಕ್ಕಕೆ ಪಲ್ಟಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 45ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ 30ಕ್ಕೂ ಹೆಚ್ಚು ಜನಕ್ಕೆ ಗಾಯವಾಗಿದ್ದು, ಅದರಲ್ಲಿ ಇಬ್ಬರಿಗೆ ಮುಂಗೈ ಕಟ್ಟಾಗಿದ್ದು, ಇಬ್ಬರಿಗೆ ಮೂಳೆ ಮುರಿದಿದೆ.
ಇದರಲ್ಲಿ ಹತ್ತ ಕ್ಕೂ ಹೆಚ್ಚು ಜನರಿಗೆ ಗಂಭೀರ ಸ್ವರೂಪ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆ ಹಾಗೂ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ ಆಗಮಿಸದ ನಂಜನಗೂಡಿನ ಗ್ರಾಮಾಂತರ ಪೊಲೀಸರು ಕ್ರೈನ್ ಸಹಾಯದಿಂದ ಬಸ್ ನ್ನ ಮೇಲಕ್ಕೆ ಎತ್ತಿ ಗಾಯಳುಗಳನ್ನ ಆಸ್ಪತ್ರೆ ಸೇರಿಸಿದ್ದಾರೆ.