ಮೈಸೂರು: ಮೈಸೂರಿನ ಕೆಸರೆ ಕುರಿಮಂಡಿ ಬಡಾವಣೆಯ ಎ ಬ್ಲಾಕ್ ನಲ್ಲಿ ಎರಡು ಗುಡಿಸಲುಗಳಿಗೆ ಬಿಂಕಿ ಬಿದ್ದಿದ್ದು, ಗುಡಿಸಲು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಕುರಿಮಂಡೆ ಬಡಾವಣೆಯಲ್ಲಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರಬೇಕೆಂದು ಶಂಕಿಸಲಾಗಿದೆ. ಆದರೆ ಮಲಗಿದ್ದವರು ಹೊರ ಬಂದುದರಿಂದ ಪ್ರಾಣಾಪಾಯಗಳಿಂದ ಪಾರಾಗಿದ್ದಾರೆ. ಈ ಪ್ರದೇಶ ನೂರಕ್ಕೂ ಹೆಚ್ಚು ಗುಡಿಸಲುಗಳನ್ನು ಹೊಂದಿದ್ದು, ಭಾರೀ ದುರಂತ ಸಂಭವಿಸುತ್ತಿತ್ತು. ಸ್ಥಳಕ್ಕೆ ಎನ್.ಆರ್.ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.