News Kannada
Tuesday, October 04 2022

ಮೈಸೂರು

ಫೇಸ್ ಬುಕ್ ಕಮೆಂಟ್ಸ್: ಅಧ್ಯಕ್ಷೆ-ಉಪಾಧ್ಯಕ್ಷೆ ನಡುವಿನ ಸಮರ, ಪೊಲೀಸ್ ಠಾಣೆಯ ಮೆಟ್ಟಿಲು - 1 min read

Photo Credit :

ಫೇಸ್ ಬುಕ್ ಕಮೆಂಟ್ಸ್: ಅಧ್ಯಕ್ಷೆ-ಉಪಾಧ್ಯಕ್ಷೆ ನಡುವಿನ ಸಮರ, ಪೊಲೀಸ್ ಠಾಣೆಯ ಮೆಟ್ಟಿಲು

ಮೈಸೂರು: ಗ್ರಾಮ ಪಂಚಾಯತಿಯ ಅಧ್ಯಕ್ಷೆಯ ಕಾರ್ಯ ವೈಖರಿಯ ಬಗ್ಗೆ ಸದಸ್ಯನೊಬ್ಬ ಉಪಾಧ್ಯಕ್ಷೆಯ ಮೊಬೈಲ್ ನಿಂದ ಫೇಸ್ ಬುಕ್ ಗೆ ಹಾಕಿದ ಕಮೆಂಟ್ ಈಗ ಪೊಲೀಸ್ ಠಾಣಾ ಮೆಟ್ಟಿಲೇರಿರುವ ಘಟನೆ ಶ್ರೀರಾಂಪುರ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

Mysuru's richest GP falls victim to FB war of words, schemers and plotters-1
ಮೈಸೂರು ನಗರದ ವ್ಯಾಪ್ತಿಯಲ್ಲಿ ಇರುವ ಅತ್ಯಂತ ಶ್ರೀಮಂತ ಗ್ರಾಮ ಪಂಚಾಯತಿ ಎಂಬ ಖ್ಯಾತಿ ಹೊಂದಿರುವ ಶ್ರೀರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಚೂಡಾಮಣೀ ಹಾಗೂ ಉಪಾಧ್ಯಕ್ಷೆ ಉಷಾ ಎಂಬ ಇಬ್ಬರು ಮಹಿಳೆ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದ್ದು, ಇದರಿಂದ ಸದಸ್ಯರ ನಡುವೆ ಗುಂಪುಗಳು ಸಹ ಹುಟ್ಟಿಕೊಂಡಿವೆ.

ಉಪಾಧ್ಯಕ್ಷೆ ಉಷಾ ಅವರ ಮೊಬೈಲ್ ತೆಗೆದು ಉಷಾ ಅವರ ಫೇಸ್ ಬುಕ್ ಅಕೌಂಟ್ ನಿಂದ ಗ್ರಾಮ ಪಂಚಾಯತಿಯ ಸದಸ್ಯ ಮಹದೇವ ನಾಯ್ಕ ಎಂಬುವನು ಕಳೆದ ಶುಕ್ರವಾರ ಅಧ್ಯಕ್ಷೆಯ ಚುಡಾಮಣಿ ಫೋಟೊ ಮುಂದೆ ಕಸ ಹಾಕಿ ಅಧ್ಯಕ್ಷರಿಗೆ ಕೆಲಸ ಮಾಡೊಕ್ಕಿಂತ ದುಡು ಮಾಡೊದೆ ಕೆಲಸ, ಅವರ ಟಾರ್ಗೆಟ್ ಮುಟ್ಟ ಬೇಕಲ್ಲ ಅದರ ಕಡೆ ಗಮನ ಎಂಬ ಕಮೆಂಟ್ ಹಾಕಿದ್ದಾರೆ. ಕಮೆಂಟ್ ಹಾಕಿರುವುದು ಉಪಾಧ್ಯಕ್ಷೆ ಉಷಾ ಅವರಿಗೆ ಗೊತ್ತಿಲ್ಲ. ಜೊತೆಗೆ ನನಗೆ ಫೇಸ್ ಬುಕ್ ನಲ್ಲಿ ಮೇಸೆಜ್ ಮಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಇದರಿಂದ ಕೋಪಗೊಂಡ ಅಧ್ಯಕ್ಷೆ ಚುಡಾಮಣಿ ಕಳೆದ ಶನಿವಾರ ದಕ್ಷಿಣಾ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದಾಗ ಠಾಣೆಯಲ್ಲಿ ಇಬ್ಬರು ರಾಜಿ ಮಾಡಿಕೊಳ್ಳಿ ಎಂದು ದೂರು ದಾಖಲಿಸಿದೆ, ಪೊಲೀಸರು ರಾಜಿ ಮಾಡಿ ಕಳುಹಿಸಿದ್ದಾರೆ.  ಈ ನಡುವೆ ನಿನ್ನೆ ಮಹದೇವ ನಾಯ್ಕ ಅಧ್ಯಕ್ಷೆ ಚುಡಾಮಣಿ ಹಾಗೂ ಅವರ ಬೆಂಬಲಿರಾಗ ತಾಲ್ಲೂಕು ಪಂಚಾಯತ್ ಸದಸ್ಯ ಹನುಮಂತು ಇತರರು ನನ್ನನ್ನ ಅಪಘಾತ ಮಾಡಿ ಸಾಯಿಸಲು ಯತ್ನಸಿದಾರೆ ಎಂದು ನಗರದ ವಿದ್ಯಾರಣ್ಯ ಪುರಂ ಠಾಣೆಗೆ ದೂರು ನೀಡಿದ್ದು ಇದಕ್ಕೆ ಅಧ್ಯಕ್ಷೆ ಇಂದು ಪ್ರತಿದೂರು ದಾಖಲಿಸಿದ್ದಾರೆ.  ಫೇಸ್ ಬುಕ್ ಕಮೆಂಟ್ಸ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಪಾಧ್ಯಕ್ಷೆಯ ನಡುವಿನ ಸಮರಕ್ಕೆ ಸಾಕ್ಷಿಯಾಗಿದ್ದು ಈ ಮೂಲಕ ಸ್ಥಳೀಯ ಜನಪ್ರತಿನಿಧಿಗಳ ಪೊಲೀಸ್ ಠಾಣೆಯ ಮೆಟ್ಟಿಲು ಏರಲು ಕಾರಣವಾಗಿದೆ.

See also  ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ವಿಗ್ರಹ ನಿಷೇಧ: ಜಿಲ್ಲಾಧಿಕಾರಿ ಡಿ. ರಂದೀಪ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು