ಮೈಸೂರು: ಚೀನಾದ ಹುಡುಗಿ ಮೈಸೂರಿನ ಹುಡುಗ ಕ್ರಿಸ್ಚಿಯನ್ ಸಂಪ್ರದಾಯದಂತೆ ನಗರದ ವೆಸ್ಲಿ ಚರ್ಚ್ ನಲ್ಲಿ ಪ್ರೇಮ ವಿವಾಹವಾಗುವ ಮೂಲಕ ಚೀನಾ-ಭಾರತದ ಪ್ರೇಮವನ್ನ ಮದುವೆಯಾಗುವ ಮೂಲಕ ಅಮರಗೊಳಿಸಿದರು.
ಮೈಸೂರಿನ ರಾಘವೇಂದ್ರನಗರ ಡೇವಿಡ್ ಅನೋಕ್ ಎಂಬ ಯುವಕ ಚೀನಾದ ಹುವಾಂಗ್ ಸಿಟಿಯಲ್ಲಿ ಕಳೆದ 4 ವರ್ಷಗಳಿಂದ ಟ್ರೇಡಿಂಗ್ ಕಂಪನಿಯಲ್ಲಿ ಅಕೌಂಟ್ಟೆಂಟ್ ಆಗಿ ಕೆಲಸ ಮಾಡುವಾಗ ಪರಿಚಯವಾದವಳು ವಾಂಗ್ ಟಾಂಗ್ ಎಂಬ ಯುವತಿ ಪರಿಚಯ ಪ್ರೀತಿಗೆ ಬೆಳೆದು ಇವರಿಬ್ಬರು ಮದುವೆಯಾಗಲು ನಿಶ್ಚಿಯಿಸಿದ್ದು, ಯುವತಿಯ ಮನೆಯವರ ಒಪ್ಪಿಗೆ ಪಡೆದು ಮೈಸೂರು ನಗರದ ಇತಿಹಾಸ ಪ್ರಸಿದ್ದ ವೆಸ್ಲಿ ಚೆರ್ಚ್ ನಲ್ಲಿ ನಿನ್ನೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದು ನಿನ್ನೆ ರಾತ್ರಿ ಬಂಧು ಮಿತ್ರರು ಸ್ನೇಹಿತರಿಗೆ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆಯನ್ನ ಏರ್ಪಡಿಸಲಾಗಿದ್ದು, ಮದುವೆ ಸಮಾರಂಭಕ್ಕೆ ಯುವತಿಯ ಕಡೆಯಿಂದ ಯಾರು ಸಹ ಬಂದಿರಲಿಲ್ಲ.
ಇವರಿಬ್ಬರು ಚೀನಾಕ್ಕೆ ಹಿಂತಿರುಗಿದ ಮೇಲೆ ಅಲ್ಲಿನ ಸಂಪ್ರದಾಯದಂತೆ ಮದುವೆಯಾಗಿ ಅಲ್ಲಿನ ಕುಟುಂಬಸ್ಥರಿಗೆ ಔತನಕೂಟವನ್ನ ಏರ್ಪಡಿಸಲು ನಿರ್ಧರಿಸಿದ್ದು, ಜೊತೆಗೆ ತಾವೇ ಒಂದು ಹೊಸ ಕಂಪನಿಯನ್ನ ಪ್ರಾರಂಭ ಮಾಡಲು ಚಿಂತನೆ ನಡೆಸಿರುವುದಾಗಿ ಡೇವಿಡ್ ತಿಳಿಸಿದರು.