ಮೈಸೂರು: ಚಲುವಾಂಬ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕಳೆದ ನಾಲ್ಕು ತಿಂಗಳುಗಳಿಂದ ವೇತನ ನೀಡಲಾಗುತ್ತಿಲ್ಲ. ಕೇವಲ 4,500ಗಳನ್ನಷ್ಟೇ ನೀಡಲಾಗಿದೆ. ಚೆಲುವಾಂಬ ಆಸ್ಪತ್ರೆ ಶುಚಿಗೊಳಿಸಲು ರಾಮಚಂದ್ರ ಎಂಬವರು ಗುತ್ತಿಗೆ ಪಡೆದಿದ್ದು, ಲಕ್ಷಾಂತರ ರೂ. ಹಣ ಪಡೆದಿದ್ದರೂ ಪೌರಕಾರ್ಮಿಕರಿಗೆ ವೇತನ ನೀಡದೇ ಸತಾಯಿಸುತ್ತಿದ್ದಾರೆ. ವೇತನ ನೀಡದ ಹಿನ್ನೆಲೆಯಲ್ಲಿ ಮೈಸೂರಿನ ಚಲುವಾಂಬ ಆಸ್ಪತ್ರೆಯ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಆಸ್ಪತ್ರೆಯನ್ನೂ ಶುಚಿಗೊಳಿಸದೇ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಹೆರಿಗೆಗೆ ಬಂದವರಿಗೆ, ಬಾಣಂತಿಯರಿಗೆ ಕಸಿವಿಸಿಯುಂಟಾಗಿದೆ. ನೂರಾರು ಹೆರಿಗೆ ಆಗುವ ಆಸ್ಪತ್ರೆಯಲ್ಲಿ ಈಗ ಅಶುಚಿತ್ವ ಕಾಡಿದೆ.
ತೊಂಬತ್ತು ಮಂದಿ ಪೌರಕಾರ್ಮಿಕರು ಪ್ರತಿದಿನ ಆಸ್ಪತ್ರೆಯನ್ನು ಶುಚಿಗೊಳಿಸುತ್ತಿದ್ದರು. ಶುಕ್ರವಾರ ಶುಚಿಗೊಳಿಸದೇ ಪ್ರತಿಭಟನೆಗಿಳಿದಿದ್ದಾರೆ.