ಮೈಸೂರು: ಸೋಲಾರ್ ರಿಪೇರಿ ಮಾಡಲು ಬಂದ ಟೆಕ್ನೀಷಿಯನ್ ಯುವಕನೋರ್ವ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜ್ ಮೇಲೆ ರಿಪೇರಿ ಮಾಡುವಾಗ ಆಯ ತಪ್ಪಿ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೀಗೆ ಮೃತ ಪಟ್ಟ ಯುವಕ ಕೊಪ್ಪಳ ಜಿಲ್ಲೆಯ ಗಂಗಾವತಿಯ ತಿಮ್ಮಾಪುರ ಗ್ರಾಮದ ಯುವಕ ವಿನೋದ್ ಕುಮಾರ್ (20). ಕಳೆದ ಒಂದು ವರ್ಷದಿಂದ ಸೋಲರ್ ಟೆಕ್ನೀಷಿಯನ್ ಆಗಿ ಎ ಸ್ಕೊಯರ್ ಪವರ್ ಸಲ್ಲೂಷನ್ ಎಂಬ ಬೆಂಗಳೂರಿನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ವಿದ್ಯಾವರ್ಧಕ ಕಾಲೇಜಿನಲ್ಲಿ ಸೋಲಾರ್ ಸಿಸ್ಟಮ್ ರಿಪೇರಿಗೆ ಬಂದಿದ್ದ ಯುವಕ ಮೂರನೇ ಮಹಡಿಯಲ್ಲಿ ಸೋಲಾರ್ ರಿಪೇರಿ ಮಾಡುವಾಗ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು ಕೂಡಲೇ ಆತನನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವ್ನಪ್ಪಿದ್ದಾನೆ.
ಕೆಲಸ ಮಾಡುತ್ತಿರುವ ಬೆಂಗಳೂರು ಕಂಪನಿಯವರು ಯುವಕನಿಗೆ ಪರಿಹಾರ ಕೊಡುವ ಬರವಸೆ ನೀಡಿದ್ದು ಈ ಮದ್ಯ ದೂರು ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.