ಮೈಸೂರು: ವಿಶ್ವ ವಿಖ್ಯಾತ ಮೈಸೂರು ಅರಮನೆಯ ಮುಂಭಾಗದಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯಾ ಯೋಗ ದಿನಾಚರಣೆಯಲ್ಲಿ ಪಾಲ್ಗೊಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಸಂಸದ ಪ್ರತಾಪ್ ಸಿಂಹ ಆಹ್ವಾನ ನೀಡಿದ್ದಾರೆ.
ಯೋಗ ನಗರಿ ಎಂದು ಹೆಸರು ಪಡೆದಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 250ಕ್ಕೂ ಹೆಚ್ಚು ಯೋಗ ಕೇಂದ್ರಗಳಿದ್ದು ಪ್ರತಿವರ್ಷ ಸುಮಾರು 10 ಸಾವಿರ ವಿದೇಶಿಯರು ಯೋಗ ಕಳಿಯಲು ಮೈಸೂರಿಗೆ ಆಗಮಿಸುತ್ತಾರೆ. ಜೊತೆಗೆ ಮೈಸೂರು ಒಡೆಯರಾದ ಮ್ಮುಮಡಿ ಕೃಷ್ಣರಾಜ ಒಡೆಯರ್ 180 ವರ್ಷಗಳ ಹಿಂದೆ ಯೋಗ ಪ್ರೋತ್ಸಾಹ ನೀಡಲು ಸಂಸ್ಕೃತ ಪಾಠ ಶಾಲೆಯಲ್ಲಿ ಯೋಗ ತರಗತಿಗಳನ್ನ ಪ್ರಾರಂಭಿಸಿದರು. ಜೊತೆಗೆ ಕೃಷ್ಣಮಾಚರ್ಯ, ಶ್ರೀರಂಗ ಗುರೂಜೀ, ಬಿಕೆ.ಎಸ್ ಐಯಾಂಗರ್, ಪಟ್ಟಾಭಿ ಜೋಯಿಸ್ ಮೊದಲಾದವರು ಮೈಸೂರಿನವರಾಗಿದ್ದು ಯೋಗಕ್ಕೆ ಅಂತರ ರಾಷ್ಟ್ರೀಯಾ ಖ್ಯಾತಿಯನ್ನ ತಂದು ಕೊಟ್ಟವರಾಗಿದ್ದಾರೆ.
ಪ್ರತಿ ವರ್ಷ ಜೂನ್ 21 ರಂದು ಅಂತರ ರಾಷ್ಟ್ರೀಯಾ ಯೋಗ ದಿನವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷವೂ ಒಂದೊಂದು ಕಡೆ ಯೋಗ ದಿನದಂದು ಭಾಗವಹಿಸುತ್ತಾರೆ. ಈ ಬಾರಿ ಯೋಗ ನಗರಿ ಮೈಸೂರಿನ ವಿಶ್ವ ವಿಖ್ಯಾತ ಅರಮನೆಯ ಮುಂಭಾಗ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯೆಂದು ಮೈಸೂರಿನಲ್ಲಿ ಪಾಲ್ಗೊಳಬೇಕೆಂದು ಸಂಸದ ಪ್ರತಾಪ್ ಸಿಂಹ ಆಹ್ವಾನಿಸಿದ್ದಾರೆ.