News Kannada
Monday, January 30 2023

ಮೈಸೂರು

ಅರಮನೆ ಉಪನಿರ್ದೇಶಕರನ್ನು ತಕ್ಷಣ ವರ್ಗಾವಣೆ ಮಾಡಿ: ಹೈಕೋರ್ಟ್ ಸರ್ಕಾರಕ್ಕೆ ಆದೇಶ

Photo Credit :

ಅರಮನೆ ಉಪನಿರ್ದೇಶಕರನ್ನು ತಕ್ಷಣ ವರ್ಗಾವಣೆ ಮಾಡಿ: ಹೈಕೋರ್ಟ್ ಸರ್ಕಾರಕ್ಕೆ ಆದೇಶ

ಮೈಸೂರು: ಅಂಬಾ ವಿಲಾಸ ಅರಮನೆಯ ಸ್ವರ್ಣ ಲೇಪನ ಹಗರಣದ ಪ್ರಕರಣದ ತನಿಖೆ ಮುಗಿಯುವವರೆಗೆ ಹಾಲಿ ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕರನ್ನ ವರ್ಗಾವಣೆ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.      

ಏನಿದು ಸ್ವರ್ಣ ಲೇಪನ ಹಗರಣ:
2012-13 ರಲ್ಲಿ ಅಂಬಾವಿಲಾಸ್ ಅರಮನೆಗೆ ಸ್ವರ್ಣ ಲೇಪನ ಕಾಮಾಗಾರಿಗೆ 3.5 ಕೋಟಿ ಟೆಂಡರ್ ಕರೆದು ಕಾಮಾಗಾರಿಯನ್ನ ಕೈಗೆತ್ತಿಕೊಳ್ಳಲಾಗಿತ್ತು. ಈ ಸಂಬಂದ ಕಾಮಾಗಾರಿಯನ್ನ ಕೈಗೊಂಡಿದ್ದು ಕಾಮಾಗಾರಿ ಮುಗಿದ ನಂತರ ಸ್ವರ್ಣ ಲೇಪನ ಕಾಮಾಗಾರಿ ಕಳಪೆ ಕಾಮಾಗಾರಿಯಾಗಿದ್ದು ಅಂದಿನ ಅರಮನೆ ಆಡಳಿತ ಮಂಡಳಿಯ ಉಪನರ್ದೇಶಕ ಟಿ.ಎಸ್ ಸುಬ್ರಮಣ್ಯ 1.5 ಕೋಟಿ ಹಣವನ್ನ ಯಾವುದೇ ಹಣಕಾಸು ಇಲಾಖೆಯ ಅನುಮತಿ ಪಡೆಯದೆ, ಆ ಅಧಿಕಾರವೂ ಇಲ್ಲದೆ 1.5 ಕೋಟಿ ಹಣವನ್ನು ಡ್ರಾ ಮಾಡಿ ಪಡೆದ ಆರೋಪದ ಹಿನ್ನಲ್ಲೆಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿತು.

ಲೋಕಾಯುಕ್ತ ತನಿಖೆ ಕೈಗೊಂಡಿದ್ದು ಸ್ವರ್ಣ ಲೇಪನ ಪ್ರಕರಣದಲ್ಲಿ ಸುಬ್ರಮಣ್ಯೆ ಆರೋಪಿ ಎಂದು ಆತನ ವಿರುದ್ದ ಎಫ್.ಐ.ಆರ್ ದಾಖಲಾಗಿತ್ತು. ಇದರ ವಿರುದ್ದ ಸುಬ್ರಮಣ್ಯ ಲೋಕಾಯುಕ್ತ ತನಿಖೆ ನಡೆಸುವಂತೆ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತಂದಿದ್ದರು. ಇದನ್ನ ಪ್ರಶ್ನಿಸಿ ಹಸಿರು ಪೀಠ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ಸ್ವರ್ಣ ಲೇಪನ ಪ್ರಕರಣದಲ್ಲಿ ಅಂದಿನ ಉಪನಿರ್ದೇಶಕ ಹಾಗೂ ಇಂದಿನ ಹಾಲಿ ಉಪನಿರ್ದೇಶಕ ಟಿ.ಎಸ್ ಸುಬ್ರಮಣ್ಯ ಪಾತ್ರ ಇದ್ದು, ಇವರು ಉಪನಿರ್ದೇಶಕರಾಗಿದ್ದು ತನಿಖೆ ನಡೆಸಲು ತೊಂದರೆಯಾಗುತ್ತಿದ್ದು ಇವರನ್ನು ವರ್ಗಾವಣೆಗೊಳಿಸಬೇಕೆಂದು ಹೈಕೋರ್ಟ್ ಅರ್ಜಿ ಸಲ್ಲಿಸಿದರು.

ಈ ಅರ್ಜಿಯ ತನಿಖೆ ಕೈಗೊಂಡ ಮುಖ್ಯ ನ್ಯಾಯಾಮೂರ್ತಿ ಮುಖರ್ಜಿ ಅವರ ದ್ವಿಸದಸ್ಯ ಪೀಠ ತಕ್ಷಣ ಇವರನ್ನ ಅರಮನೆ ಉಪ ನಿರ್ದೇಶಕರ ಸ್ಥಾನದಿಂದ ವರ್ಗಾವಣೆಗೊಳಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶ ನೀಡಿದೆ.

See also  ಬಂಧನ ಭೀತಿ ಹಿನ್ನಲೆ: ಕೋರ್ಟ್ ಗೆ ಹಾಜರಾದ ನಟ ಮಂಡ್ಯ ರಮೇಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು