ಮೈಸೂರು: ಅಪರಾಧ ಪ್ರಕರಣದಲ್ಲ್ದಿ ಸಾಕ್ಷಿ ಸಿಗದಂತೆ ಮಾಡಲು ಆರೋಪಿಗಳು ಮೊಬೈಲ್ ಗಳನ್ನ ಕೊಳವೊಂದರಲ್ಲಿ ಎಸೆದಿದ್ದು ತನಿಖೆ ವೇಳೆಯಲ್ಲಿ ಈ ವಿಚಾರ ಬಾಯಿಬಿಟ್ಟಿದ್ದು ಇದರಿಂದ ಪೋಲಿಸರು ಕೊಳದ ನೀರನ್ನ ಕಳೆದ ನಾಲ್ಕು ದಿನಗಳಿಂದ ಮೋಟರ್ ಮೂಲಕ ಖಾಲಿ ಮಾಡಿ ಮೂರು ಮೊಬೈಲ್ ಗಳನ್ನ ವಶಪಡಿಸಿಕೊಂಡಿರು ಘಟನೆ ನಂಜನಗೂಡು ತಾಲ್ಲೂಕಿನ ಎಡತಲೆ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯಲ್ಲಿ ನಡೆದ ಗಂಭೀರ ಪ್ರಕರಣವೊಂದರಲ್ಲಿ ಆರೋಪಿಗಳನ್ನ ಬಂಧಿಸಿರುವ ಪೋಲಿಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣದ ಸಂಬಂಧ ಸಂಚಿಗೆ ಬಳಸಿದ್ದ ಮೂರು ಮೊಬೈಲ್ ಗಳನ್ನ ಯಾರಿಗೂ ಸುಳಿವು ಸಿಗದಂತೆ ಮಾಡಲು ಸಿಮ್ ಸಹಿತ ನಂಜನಗೂಡು ತಾಲ್ಲೂಕಿನ ಎಡತಲೆ ಗ್ರಾಮದ ನೀರಿನ ಕೊಳದಲ್ಲಿ ಬಿಸಾಕಿರುವುದಾಗಿ ಆರೋಪಿಗಳು ಬಾಯಿಬಿಟ್ಟ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧೀಕಾರಿ ಸುಧೀರ್ ಕುಮಾರ್ ರೆಡ್ಡಿ ಅವರ ಮಾರ್ಗದರ್ಶನದಂತೆ ಕಳೆದ ಶನಿವಾರದಿಂದ ಕೊಳಕ್ಕೆ ಮೋಟಾರ್ ಹಾಕಿ ಕೊಳದ ನೀರನ್ನ ಖಾಲಿ ಮಾಡಿಸಿದ್ದು ನಿನ್ನೇ ಸಂಜೆ ಕೊಳದಲ್ಲಿ ಮೂರು ಮೊಬೈಲ್ಗಳು ದೊರತಿದ್ದು ಇಂದು ಕಾರ್ಯಾಚರಣೆಯನ್ನ ಮುಗಿಸಿದ್ದಾರೆ.
ಕೊಳದ ನೀರನ್ನ ಏಕೆ ತೆಗೆಯುತ್ತಿದ್ದಾರೆ ಎಂದು ತಿಳಿಯದ ಗ್ರಾಮಸ್ಥರು ಗುಂಪು ಗುಂಪಾಗಿ ಸೇರುತ್ತಿದ್ದು ಯಾರಿಗೂ ಪೋಲಿಸರು ಮಾಹಿತಿ ನೀಡದೆ ತಮ್ಮ ಕಾರ್ಯಾಚರಣೆಯನ್ನ ಗುಪ್ತವಾಗಿ ನಡೆಸಿ ಮುಗಿಸಿದ್ದಾರೆ.