ಮೈಸೂರು: ತನ್ನ ಪ್ರಿಯತಮೆಗೆ ಡ್ರೆಸ್ ಬೇಕೆಂದು ಬಟ್ಟೆ ಅಂಗಡಿಗೆ ಬಂದ ಖದೀಮ ಮಾಲೀಕನ ದುಬಾರಿ ಮೊಬೈಲ್ ಗಳನ್ನೇ ಕಳವು ಮಾಡಿದ ಪ್ರಕರಣ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ದೇವರಾಜ ರಸ್ತೆಯಲ್ಲಿರುವ ರೆಡಿಮೆಡ್ ಲೇಡಿಸ್ ಬಟ್ಟೆ ಅಂಗಡಿಗೆ ಪ್ರೇಮಿಗಳ ದಿನ ಸುಮಾರು 1 ಗಂಟೆಯ ಸಮಯದಲ್ಲಿ ನನ್ನ ಗೆಳತಿಗೆ ಡ್ರೆಸ್ ಬೇಕೆಂದು ಬಂದ ಖದೀಮನೊಬ್ಬ ಡ್ರೆಸ್ ತೋರಿಸಿ ಎಂದು ಬಟ್ಟೆ ಅಂಗಡಿಯ ಸೇಲ್ಸ್ ಮ್ಯಾನ್ ಗೆ ಹೇಳಿದಾಗ ಅವನು ಎರಡು ತರಹದ ಡ್ರೆಸ್ ಟಾಪ್ ಗಳನ್ನ ತೋರಿಸಿದ್ದು ಇದೇ ಸಂಧರ್ಭದಲ್ಲಿ ಕ್ಯಾಶ್ ಕೌಂಟರ್ ನಲ್ಲಿ ಕುಳಿತಿದ ಮಾಲೀಕ ಹಾಗೂ ಪಕ್ಕದಲ್ಲಿ ಕುಳಿತದ ಆತನ ಸ್ನೇಹಿತ 1.10 ಕ್ಕೆ ನಮಾಜ್ ಗೆ ಹೋಗುವ ಸಲುವಾಗಿ ದುಬಾರಿ ಬೆಲೆಯ ಎರಡು ಮೊಬೈಲ್ ಗಳನ್ನ ಕ್ಯಾಶ್ ಕೌಂಟರ್ ನ ಮೇಲ್ಬಾಗದಲ್ಲಿ ಇಟ್ಟು ನಮಾಜ್ ಹೋಗುತ್ತಾರೆ.
ಇದನ್ನ ಗಮನಿಸಿದ ಖದೀಮ ಬಟ್ಟೆ ತೆಗೆದುಕೊಳ್ಳುವಂತೆ ನಾಟಕವಾಡಿ ಸೇಲ್ಸ್ ಮ್ಯಾನ್ ಗೆ ಗೊತ್ತಾಗದಂತೆ ಎರಡು ಮೊಬೈಲ್ ಗಳನ್ನ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ದೇವರಾಜ ಠಾಣೆಗೆ ದೂರು ದಾಖಲಿಸಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಸಿಸಿಟಿವಿ ದೃಶ್ಯವನ್ನ ಪರಿಶೀಲನೆ ನಡೆಸಿ ಸಿಸಿಟಿವಿ ದೃಶ್ಯವಳಿಗಳನ್ನ ಪಡೆದು ಕಳ್ಳನ ಸೆರೆಗೆ ಬಲೆ ಬೀಸಿದ್ದಾರೆ.