ಮೈಸೂರು: ಜೆಡಿಎಸ್ ಪಕ್ಷ ಬಿಡುವ ಬಗ್ಗೆ ವರಿಷ್ಟರಿಂದ ಅನುಮತಿ ಪಡೆದಿದೆ ಎಂದು ಕಳಲೇ ಕೇಶವಮೂರ್ತಿ ಕೇಳಿರುವುದು ತುಂಬಾ ನೋವಿನ ಸಂಗತಿ, ಆತ ಪಕ್ಷ ಬಿಡುವ ಬಗ್ಗೆ ನನ್ನಿಂದ ಯಾವುದೇ ಅನುಮತಿ ಪಡೆದಿಲ್ಲ, ಆತ ಒಬ್ಬ ಸಜ್ಜನ ಎಂದುಕೊಂಡಿದ್ದೆ. ಆದರೆ ಅವನೊಬ್ಬ ಅಪಾಯಕಾರಿ ವ್ಯಕ್ತಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಂಜನಗೂಡು ಉಪಚುನಾವಣೆಗೆ ಅಭ್ಯರ್ಥಿ ಸ್ಪರ್ಧೆಯ ವಿಚಾರದಲ್ಲಿ ಕಾರ್ಯಕರ್ತರ ಸಭೆ ನಡೆಸವ ಸಲುವಾಗಿ ಆಗಮಿಸಿರುವ ಕುಮಾರಸ್ವಾಮಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅಭ್ಯರ್ಥಿಯನ್ನ ಆಯ್ಕೆ ಮಾಡುವ ವಿಚಾರವಾಗಿ ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ಎರಡು ರಾಷ್ಟ್ರೀಯಾ ಪಕ್ಷಗಳು ಹಣದ ಹೊಳೆಯನ್ನ ಚುನಾವಣೆಯಲ್ಲಿ ಹರಿಸುತ್ತಾರೆ. ಆದರೆ ನಾವು ಸಾಲ ಸೋಲ ಮಾಡಿ ಚುನಾವಣೆ ನಡೆಸಬೇಕಾಗಿರುವುದರಿಂದ ಈ ಬಗ್ಗೆ ಕಾರ್ಯರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕಳಲೇ ಕೇಶವಮೂರ್ತಿ ಸಜ್ಜನ ಮುನುಷ್ಯ ಎಂದುಕೊಂಡಿದ್ದೆ, ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ನೀವು ಪಕ್ಷ ಬಿಟುಹೋಗಬೇಡಿ ಚುನಾವಣೆಗೆ ಸ್ಪರ್ಧಿಸುವುದಾದರೆ ಸ್ಥಳದಲ್ಲೇ 30 ಲಕ್ಷ ಹಣವನ್ನ ಸಭೆಯಲ್ಲಿ ಕಾರ್ಯಕರ್ತರು ಕೊಡಲು ಮುಂದಾಗಿದರೂ. ಆದರೂ ನನ್ನ ಹಾಗೂ ದೇವೇಗೌಡರ ಅನುಮತಿ ಪಡೆದು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿದ್ದೇನೆ ಎಂದು ಮಾಧ್ಯಮದವರಿಗೆ ಹೇಳಿಕೆ ನೀಡದ ಕಳಲೇ ಕೇಶವಮೂರ್ತಿ ನಮ್ಮಿಂದ ಯಾವುದೇ ಅನುಮತಿ ಪಡೆಯದೆ ಕಾಂಗ್ರೆಸ್ ಸೇರಿದ್ದಾರೆ. ಆತ ಒಬ್ಬ ಅಪಾಯಕಾರಿ ವ್ಯಕ್ತಿ ಎಂದ ಕುಮಾರಸ್ವಾಮಿ ಪಕ್ಷವನ್ನ ಯಾರಿಗೂ ಮಾರಲು ಬಿಡುವುದಿಲ್ಲ, ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನ ಸ್ಪರ್ಧೆ ಮಾಡುವ ಬಗ್ಗೆ ಚೆರ್ಚೆ ಮಾಡಲಾಗುವುದು ಎಂದರು.
ಸಿದ್ದರಾಮಯ್ಯನವರಿಗೆ ವಲಸೆ ಕಾಂಗ್ರೆಸಿಗರ ಮೇಲೆ ನಂಬಿಕೆ ಜಾಸ್ತಿ ಮೂಲ ಕಾಂಗ್ರೆಸಿಗರ ಮೇಲೆ ನಂಬಿಕೆ ಇಲ್ಲ, ಅಲ್ಲದೆ ಎರಡು ರಾಷ್ಟ್ರೀಯಾ ಪಕ್ಷಗಳಿಗೂ ಹಣ ಇದೆ, ಆದರೆ ಸ್ಪರ್ಧೆ ಮಾಡುವ ಅರ್ಹ ಅಭ್ಯರ್ಥಿಗಳೆ ಇಲ್ಲ ಎಂದು ವಾಗ್ದಾಳ ನಡೆಸಿದರು.
ವಕ್ಕಲಿಗರ ಸಂಘದಿಂದ ದೂರು:
ಇತ್ತೀಚಿಗೆ ನಡೆಯುತ್ತಿರುವ ವಕ್ಕಲಿಗರ ಸಂಘದ ಚಟುವಟಿಕೆಗಳ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನಾನು ವಕ್ಕಲಿಗರ ಸಂಘದ ಯಾವುದೇ ಚಟುಚಟಿಕೆಗಳಲ್ಲಿ ಭಾಗವಹಿಸಿಲ್ಲ, ಸಂಘದ ಸಹವಾಸದಿಂದ ದೂರ ಇದ್ದೇನೆ ಎಂದು ಮಾರ್ಮಿಕವಾಗಿ ಡಿ.ಕೆ. ಶಿವಕುಮಾರ್ ವಿರುದ್ದ ಹೇಳಿಕೆ ನೀಡಿದರು.