ಮೈಸೂರು: ಭ್ರಷ್ಟಾಚಾರ ಮಾಡಿ ಎಷ್ಟೇ ಸತ್ಯಮೇವ ಜಯತೆ ಕಾರ್ಯಕ್ರಮ ಮಾಡಿದರೂ ಜನ ಒಪ್ಪಲ್ಲ. 2018 ರ ಚುನಾವಣೆಯೇ ನಿಜವಾದ ಸತ್ಯ ಮೇವ ಜಯತೆ ಗೊತ್ತಾಲಿಗಿದೆ ಎಂದು ಸಂಸದ ಪ್ರತಾಪ್ ಸಿಂಹ ನಾಳಿನ ಕಾಂಗ್ರೆಸ್ ನ ಸತ್ಯಮೇವ ಜಯತೆ ಪ್ರತಿಭಟನೆ ಬಗ್ಗೆ ವಾಗ್ದಾಳಿ ನಡೆಸಿದರು.
ಮೈಸೂರಿನ ಪತ್ರಕರ್ತರಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ದ ಹಾಗೂ ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡಿರುವ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ ಗೂಂಡುರಾವ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಒಬ್ಬ ರಾಜಕಾರಣಿಯಾಗಿ ದಿನೇಶ್ ಗುಂಡುರಾವ್ ಆಡಿದ ಮಾತುಗಳು ಸರಿ ಇರಲಿಲ್ಲ. ಯಡಿಯೂರಪ್ಪ ಆಢಳಿತವನ್ನು ರಾಜ್ಯದ ಜನ ಇಂದೂ ನೆನೆದುಕೊಳ್ಳುತ್ತಾರೆ. ನಿನ್ನೆ ಗುಂಡುರಾವ್ ಮಾನಸಿಕ ಸ್ಥಿಮಿತದಲ್ಲಿ ಇದ್ರಾ ಎಂಬ ಅನುಮಾನ ಕಾಣುತ್ತದೆ. ಅಟಲ್ ಅವರ ಬಗ್ಗೆ ಅವಮಾನಕರವಾಗಿ ಮಾತನಾಡಿದ ಸೋನಿಯಾಗಾಂಧಿ ತಕ್ಕ ಪಾಠ ಕಲಿತಿದ್ದಾರೆ. ಯಡಿಯೂರಪ್ಪ ಅವರ ಆಢಳಿತ ನೆನೆಸಿಕೊಂಡರೆ ಸಾಕಷ್ಟು ಜನಪ್ರಿಯ ಯೋಜನೆಗಳು ನೆನಪಾಗುತ್ತದೆ ಎಂದು ಪ್ರತಾಪ್ ಸಿಂಹ, ದಿನೇಶ್ ಗುಂಡೂರಾವ್ ಅವರ ತಂದೆ ಆಡಳಿತವನ್ನು ನೆನೆದರೆ ಕೇವಲ ರೌಡಿಗಳನ್ನು ಹುಟ್ಟು ಹಾಕಿದ್ದು, ಸ್ವಿಮಿಂಗ್ ಪೂಲ್ ನೆನಪಾಗುತ್ತೆ. ಸರ್ವಾಧಿಕಾರಿ ವಿಚಾರಕ್ಕೆ ಬಂದರೆ ಅಲ್ಲಿ ಕಾಣಿಸಿಕೊಳ್ಳುವವರು ಕಾಂಗ್ರೆಸ್ಸಿಗರೇ ಎಂದರು.
ಮಂತ್ರಿಯಾಗಿ ದಿನೇಶ್ ಗುಂಡೂರಾವ್ ಏನು ಮಾಡಿದ್ದಾರೆ. ಅವರು ಸರಿಯಾಗಿ ಕೆಲಸ ಮಾಡಿಲ್ಲ ಅಂತಲೇ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಿದ್ದಾರೆ. ಡೈರಿಯಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಎಲ್ಲಕ್ಕೂ ಉತ್ತರ ಇದೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ಮುಂದಾದರು ವಿರೋಧ ಮಾಡುವ ವಿಚಾರದಲ್ಲಿ ವಯಕ್ತಿಕ ವಿಚಾರಗಳನ್ನು ತರಬಾರದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ವಿಚಲಿತವಾಗಿ ಈ ರೀತಿ ಹತಾಶರಾಗಿ ಆರೋಪ ಮಾಡ್ತಿದ್ದಾರೆ. ಮುಂದೆ ಯಡಿಯೂರಪ್ಪ ವಿರುದ್ದ ಆರೋಪ ಮಾಡುವಾಗ ಜಾಗೃತೆ ಇರಲಿ. ಇಲ್ಲದೇ ಹೋದರೆ ನಮಗೂ ಆ ರೀತಿ ಮಾತನಾಡಲು ಬರುತ್ತೆ ಎಂದು ಎಚ್ಚರಿಸಿದ ಸಂಸದರು, ಸಿದ್ದರಾಮಯ್ಯ ಅವ್ರು ಜೈಲಿಗೆ ಹೋಗಲಿ ಅಂತಾ ನಾನು ಬಯಸಲಿಲ್ಲ. ಸಾರ್ವಜನಿಕ ಜೀವನದಲ್ಲಿ ಆರೋಪಗಳು ಬಂದಾಗ ಸರಾಕಾತ್ಮಕವಾಗಿ ಸ್ಪಂದಿಸಬೇಕು. ಗೃಹ ಸಚಿವರೇ ಪೊಲೀಸ್ ಇಲಾಖೆಯಲ್ಲಿ ನಮ್ಮದೇನೂ ನಡೆಯುತ್ತಿಲ್ಲ ಅಂತಾ ಹೇಳಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಇಲಾಖೆಯನ್ನ ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದೇ ಉದಾಹರಣೇ ಎಂದರು.