ಮೈಸೂರು: ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ನ ಮಾಲೀಕರಾದ ಉದ್ಯಮಿ ಕೆ.ಪಿ ನಂಜುಂಡಿ ಸೇರಿ ನಾಲ್ವರ ವಿರುದ್ದ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಗೆ ಕಿಡ್ನ್ಯಾಪ್ ಕೇಸ್ ದಾಖಲಾಗಿದೆ.
ಲಕ್ಷ್ಮೀಗೋಲ್ಡ್ ಪ್ಯಾಲೇಸ್ ನ ಮ್ಯಾನೇಜರ್ ಆದ ವಿಜಯ್ ಕುಮಾರ್ ಅವರನ್ನ ಕೆ.ಪಿ ನಂಜುಂಡಿ ಅವರೇ ಕಿಡ್ನ್ಯಾಪ್ ಮಾಡಿಸಿದ ಆರೋಪದಲ್ಲಿ ವಿಜಯ್ ಕುಮಾರ್ ಅವರ ಪತ್ನಿ ಅಲಮೇಲು ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೆ.ಪಿ ನಂಜುಂಡಿಯವರ ಸ್ನೇಹಿತರಾದ ರಾಜನ್, ರಾಮಕೃಷ್ಣ, ರಾಜು, ಕಾರ್ಯ ವಿರುದ್ದ ಈ ಕುರಿತು ಎಫ್ ಐಆರ್ ದಾಖಲಾಗಿದೆ.
ಪ್ರಕರಣ ಸಂಬಂಧ ದೂರು ನೀಡಿರುವ ಅಲಮೇಲು ಅವರು, ನನ್ನ ಪತಿ ವಿಜಯ್ ಕುಮಾರ್ ಅವರಿಗೆ ಕೆ.ಪಿ ನಂಜುಂಡಿ ಅವರ ಅಕ್ರಮಗಳು ತಿಳಿದಿದ್ದು, ಇದನ್ನ ಎಲ್ಲಿ ಬಹಿರಂಗಪಡಿಸುತ್ತಾರೋ ಎಂಬ ಭಯದಲ್ಲಿ ಕಿಡ್ನಾಪ್ ಮಾಡಿ ಮೂರು ದಿನಗಳಿಂದ ಕೂಡಿ ಹಾಕಿದ್ದಾರೆ.
ಮೈಸೂರಿನಲ್ಲಿ ಕೂಡಿ ಹಾಕಿದ್ದು, ಮೂರು ದಿನಗಳಿಂದ ನನ್ನ ಪತಿಗೆ ಅನ್ನ ನೀರು ಸಹ ನೀಡದೆ ಪೀಡಿಸಿದ್ದಾರೆ ಎಂದು ದೂರಿನಲ್ಲಿ ವಿಜಯ್ ಕುಮಾರ್ ಪತ್ನಿ ಅಲಮೇಲು ಉಲ್ಲೇಖಿಸಿದ್ದಾರೆ.
ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.