ಮೈಸೂರು: ಭೀಮ್ ಆಪ್ ಮತ್ತು ರುಪೇ ಬಳಸಿ ಲಕ್ಕಿ ಗ್ರಾಹಕರ ಯೋಜನೆಯಡಿ ಒಂದು ಸಾವಿರ ಬಹುಮಾನ ಗೆದ್ದ ಮೈಸೂರಿನ ತಿಲಕನಗರದ ಯುವಕನ ಬಗ್ಗೆ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಪ್ರಸಂಶೆ ಬಗ್ಗೆ ಸಂತೋಷ ತಮ್ಮ ಸಂತಸವನ್ನ ವ್ಯಕ್ತ ಪಡಿಸಿದ್ದಾರೆ.
ಲಕ್ಕಿ ಗ್ರಾಹಕರ ಯೋಜನೆ ಅಡಿ ಬಂದ ಒಂದು ಸಾವಿರ ಹಣವನ್ನ ಸಂತೋಷ ಅನಿಲ ಸೋರಿಕೆಯಿಂದ ಮನೆ ಸುಟ್ಟ ವೃದ್ದೆ ಭಾಗ್ಯಮ್ಮಗೆ ನೀಡಿದನು. ಈ ಬಗ್ಗೆ ಸಂತೋಷ ಮೋದಿ ಅವರಿಗೆ ಮೊಬೈಲ್ ಆಪ್ ಮೂಲಕ ಗಮನ ಸೆಳೆದಿದರು. ಈ ವಿಚಾರವನ್ನ ನಿನ್ನೆ ಪ್ರಧಾನಿ ಮೋದಿ ಅವರು ರೆಡಿಯೋದ ಮನ್ ಕೀಬಾತ್ ನಲ್ಲಿ ಕಾರ್ಯಕ್ರಮದಲ್ಲಿ ಮೈಸೂರಿನ ಯುವಕನ ಕಾರ್ಯದ ಬಗ್ಗೆ ಪ್ರಸಂಶೆ ವ್ಯಕ್ತ ಪಡಿಸಿದ್ದು, ನನಗೆ ತುಂಬಾ ಸಂತೋಷ ಉಂಟು ಮಾಡಿದೆ ಎಂದು ಸಂತೋಷವನ್ನ ವ್ಯಕ್ತ ಪಡಿಸಿದರು.