ಮೈಸೂರು: ಸೋಮವಾರ ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಎಂ.ಮಲ್ಲಿಕಾರ್ಜುನಸ್ವಾಮಿ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕವಾಗಿ ಸದೃಢರಾದಾಗ ಮಾತ್ರ ದೇಶದ ಆಸ್ತಿಯಾಗಲಿದ್ದು, ವಿದ್ಯಾಭ್ಯಾಸದೊಂದಿಗೆ ಸರ್ವತೋಮುಖ ಬೆಳವಣಿಗೆಗೂ ಆದ್ಯತೆ ನೀಡಬೇಕು.
ಅತೀ ವೇಗವಾಗಿ ಬೆಳೆಯುತ್ತಿರುವ ಯುಗದಲ್ಲಿ ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿಗಳು ಸಿಗುವುದರಿಂದ ಅವುಗಳನ್ನು ಸರಿಯಾಗಿ ಬಳಸಿಕೊಂಡು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ದೇಶದಲ್ಲಿ ಸುಮಾರು 350 ಮಿಲಿಯನ್ ಯುವಕರಿದ್ದು, ಜನಸಂಖ್ಯೆಯಲ್ಲಿ ಶೇ.32ರಷ್ಟು 35 ವರ್ಷದೊಳಗಿನ ಯುವಕ, ಯುವತಿಯರಿದ್ದಾರೆ. ವಿಶ್ವದ ಬೇರೆ ಯಾವ ದೇಶದಲ್ಲೂ ಇಷ್ಟು ಪ್ರಮಾಣದ ಯುವಕರಿಲ್ಲ.
ಸಾಹಿತ್ಯ ಹಾಗೂ ರಾಜಕಾರಣದ ಮೇಲೆ ಐತಿಹಾಸಿಕ ಅಂಶಗಳ ಪ್ರಭಾವ ಇರುವುದರಿಂದ ಯುವಕರು ಕೇವಲ ಪದವಿ ಹಾಗೂ ಅಂಕಗಳಿಕೆಗೆ ಸೀಮಿತವಾಗಬಾರದು. ರಾಮಾಯಣ, ಮಹಾಭಾರತ, ಚಾಣಕ್ಯನ ಅರ್ಥಶಾಸ್ತ್ರದಲ್ಲಿ ರಾಜಕೀಯ ಅಂಶಗಳನ್ನು ತಿಳಿಸಿರುವುದರಿಂದ ಯುವಕರು ಹೆಚ್ಚೆಚ್ಚು ಸಾಹಿತ್ಯ ಅಧ್ಯಯನ ಮಾಡಬೇಕು. ಆ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕೇವಲ ಅಂಕಗಳಿಸಿದರೆ, ಎರಡೆರಡು ಪದವಿ ಪಡೆದರೆ ಉದ್ಯೋಗ ದೊರೆಯುವುದಿಲ್ಲ. ನಿಮ್ಮದೇ ಆದ ಕೌಶಲ್ಯ, ಬುದ್ಧಿವಂತಿಕೆಯನ್ನು ಪ್ರದರ್ಶಿಸಬೇಕು. ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಎಂತಹ ಸನ್ನಿವೇಶದಲ್ಲಿಯೂ ಛಲ ಬಿಡದೆ ಹೋರಾಡುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಶೇಖರ್ ಮಲ್ಲಿಕಾರ್ಜುನಸ್ವಾಮಿ, ಜಯಮ್ಮ ಮಲ್ಲಿಕಾರ್ಜುನಸ್ವಾಮಿ, ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಕೆ.ಎಂ.ಮಹದೇವಪ್ಪ, ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಿ.ಟಿ.ರಾಮಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.