ಮೈಸೂರು: ಸಾಯಿ ಬಾಬಾನಿಗೂ ಪವಾಡಕ್ಕೂ ಎಲ್ಲಿಲ್ಲದ ನಂಟು ಎಂಬುದಕ್ಕೆ ಇಲ್ಲೊಂದು ನಿದರ್ಶನ ಗೋಚರವಾಗಿದ್ದು, ಹುಣುಸೂರಿನ ಸಾಯಿ ಬಾಬಾ ಮಂದಿರದಲ್ಲಿ ಸಾಯಿ ಬಾಬಾ ವಿಗ್ರಹದ ಮುಂದೆ ಶಿರಡಿ ಸಾಯಿ ಬಾಬಾ ಮೂರ್ತಿಯ ಆಕೃತಿಯ ಬೆಳಕ್ಕೊಂದು ಗೋಚರಿಸಿದ್ದು, ಈ ಆಕೃತಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಯಿಬಾಬಾನೇ ಪ್ರತ್ಯಕ್ಷನಾದನೇ ಎಂಬ ಸುದ್ದಿ ಹರಿದಾಡುತ್ತಿದೆ.
ಮೈಸೂರು ಜಿಲ್ಲೆಯ ಹುಣುಸೂರು ಪಟ್ಟಣದ ಹಳೆ ಬಿಎಂ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ಬೆಳಗ್ಗೆ 7.40ರ ಸಮಯದಲ್ಲಿ ಸಾಯಿ ಬಾಬಾ ಮೂರ್ತಿಯ ಮುಂದೆ ಅಗೋಚರ ಬೆಳಕ್ಕೊಂದು ಕ್ಷಣ ಕಾಲದಲ್ಲಿ ದೇವಸ್ಥಾನದಲ್ಲಿ ಗೋಚರವಾಗಿದ್ದು, ವ್ಯವಸ್ಥಾಪಕರು ಆ ಸ್ಥಳಕ್ಕೆ ನೋಡಿದಾಗ ಆ ದೃಶ್ಯ ಕಾಣುತ್ತಿಲ್ಲ, ಆದರೆ ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಯಿಬಾಬಾನೇ ಪ್ರತ್ಯಕ್ಷನಾಗಿದ್ದಾರೆ ಎಂದು ಭಕ್ತರ ದಂಡು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.
ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪಕರಾದ ಸುಧನ್ವ ಹೇಳುವುದೇನೆಂದರೆ, ಸೋಮವಾರ ಬೆಳಗ್ಗೆ 7.40ರ ಸುಮಾರಿಗೆ ದೇವಸ್ಥಾನದ ಕಛೇರಿಯಲ್ಲಿ ಕುಳಿತ್ತಿದ್ದೆ. ನನ್ನ ಮುಂದೆ ಸಿಸಿಟಿವಿಗೆ ಅಳವಡಿಸಿರುವ ಟಿವಿ ಇದ್ದು ಆ ಟಿವಿಯಲ್ಲಿ ಬೆಳಕಿನ ಆಕೃತಿಯಲ್ಲಿ ಸಾಯಿ ಬಾಬಾನ ರೂಪ ಕಾಣಿಸಿದ್ದು, ತಕ್ಷಣ ಸಾಯಿ ವಿಗ್ರಹದ ಮುಂದೆ ನೋಡಿದಾಗ ಆ ಬೆಳಕು ಕಾಣಿಸಲಿಲ್ಲ. ಈ ಆಕೃತಿಯ ದೃಶ್ಯ 15 ಸೆಕೆಂಡ್ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನುತ್ತಾರೆ.