ಮೈಸೂರು: ರಾಜಕೀಯ ಬೇರೆ ನಡವಳಿಕವೇ ಬೇರೆ 84ನೇ ವಯಸ್ಸಿನಲ್ಲಿ ನಾನು ಅನಾಗರಿಕನಾಗಿ ನಡೆದುಕೊಳ್ಳುವುದಿಲ್ಲ ಎಂದು ಚೆಲುವಾರಯಸ್ವಾಮಿ ದಂಪತಿ ಜೊತೆ ಅನಾಗರಿಕ ವರ್ತನೆಯ ಬಗ್ಗೆ ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಜೆಡಿಎಸ್ ಬಂಡಾಯ ಶಾಸಕ ಚೆಲುವರಾಯಸ್ವಾಮಿಯವರ ಪತ್ನಿಯ ಜೊತೆ ನಾನು ಅನಾಗರಿಕನಾಗಿ ನಡೆದುಕೊಂಡಿಲ್ಲ. ಗೌರವದಿಂದ ಕಂಡು, ಆಶಿರ್ವದಿಸಿದ್ದೇನೆ. ಯಾರ ಜೊತೆಯೂ ನಾನು ಅನಾಗರಿಕನಾಗಿ ನಡೆದುಕೊಳ್ಳುವುದಿಲ್ಲ. 84ನೇ ವಯಸ್ಸಿನಲ್ಲಿ ನಾನು ಅನಾಗರಿಕವಾಗಿ ನಡೆದುಕೊಳ್ಳುವುದಿಲ್ಲ. ರಾಜಕೀಯವೇ ಬೇರೆ, ನಡವಳಿಕೆಯೇ ಬೇರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ತುರ್ತು ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಶಾಸಕ ಗೋಪಾಲಯ್ಯ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ದೇವೇಗೌಡ. ಅಂದು ಒಂದು ದಿನ ಮಾತ್ರ ಆಕಸ್ಮಿಕವಾಗಿ ಗೋಪಾಲಯ್ಯ ಆ ರೀತಿ ನಡೆದುಕೊಂಡಿದ್ದಾರೆ. ಉಳಿದ ದಿನಗಳಲ್ಲಿ ಪಕ್ಷದಲ್ಲಿ ಚೆನ್ನಾಗಿ ನಡೆದುಕೊಂಡಿದ್ದಾರೆ. ಗೋಪಾಲಯ್ಯ ಪಕ್ಷದ ಶಿಸ್ತು ಸಮಿತಿ ಮುಂದೆ ಕ್ಷಮೆ ಕೇಳಿದ್ದಾರೆಂದು ಹೇಳಿದ ದೇವೇಗೌಡರು, ಜೆಡಿಎಸ್ ನ ಬಂಡಾಯ ಶಾಸಕರ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಹೋರಾಟ ಮಾಡುವುದಾಗಿ ಘೋಷಿಸಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರ. ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡುತ್ತೇವೆ. ಅದು ಮಾರ್ಚ್ ನಲ್ಲೆ ಆಗಬೇಕು ಎಂದೇನಿಲ್ಲ. ಆದರೂ ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಕುರಿತು ಕುಮಾರಸ್ವಾಮಿ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಜನರು ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದಾರೆ. ಅವರ ಅಭಿಪ್ರಾಯಕ್ಕೆ ನನ್ನ ಸಲಹೆ ನೀಡುತ್ತೇನೆ. ಮುಂದಿನ ನಿರ್ಧಾರವನ್ನ ಕುಮಾರಸ್ವಾಮಿ ತೆಗೆದುಕೊಳ್ಳುತ್ತಾರೆ ಎಂದರು.
ರಾಷ್ಟ್ರೀಯ ಪಕ್ಷಗಳಿಂದಲೂ ಕಪ್ಪ ಕಾಣಿಕೆ ವಿಚಾರ:
ಇದು ನೋವಿನ ವಿಚಾರ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಸಂಪತ್ತು ದುರ್ಬಳಕೆ. ನಾನು ಸಿಎಂ ಹಾಗೂ ಪಿಎಂ ಆಗಿದ್ದಾಗ ನನಗೆ ಈ ಪರಿಸ್ಥಿತಿ ಬಂದಿರಲಿಲ್ಲ. ನಾನು ಯಾರ ಹಂಗಿನಲ್ಲೂ ಅಧಿಕಾರ ನಡೆಸಿಲ್ಲ. ರಾಜ್ಯದ ಜನ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಅಪೇಕ್ಷಿಸಿದ್ದಾರೆ. ಯಡಿಯೂರಪ್ಪ ಸಿದ್ದರಾಮಯ್ಯ ಆರೋಪ ಪ್ರತ್ಯಾರೋಪ ವಿಚಾರ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ಸರಿಯಲ್ಲ. ನಾನು ಯಾವತ್ತು ಈ ರೀತಿ ರಾಜಕಾರಣ ಮಾಡಿಲ್ಲ. ನಾನು ಯಾರಿಗೂ ಸಲಹೆ ಕೊಡುವುದಿಲ್ಲ. ನನ್ನ ಸಲಹೆಯನ್ನು ಯಾರು ಕೇಳುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.