ಮೈಸೂರು: ಭಾರತೀಯ ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇಂದಿನ ಕಾಲದಲ್ಲಿ ಅಮೇರಿಕದ ಯುವ ಜೋಡಿಗಳು ಭಾರತೀಯ ಸಂಪ್ರದಾಯಕ್ಕೆ ಮನಸೋತು ಇಲ್ಲಿನ ಸಂಪ್ರದಾಯದಂತೆ ಎಂಗೇಜ್ ಮೆಂಟ್ ಮಾಡಿಕೊಂಡು ಅಮೇರಿಕಕ್ಕೆ ಹೋಗಿದ್ದಾರೆ.
ಅಮೇರಿಕದ ಇಂಕಾ ರಾಜ ಮನೆತನದ ಸದಸ್ಯರೊಲ್ಲಬ್ಬರಾದ ಕಲ್ಕಿ ಹೆನ್ರಿಕ್(kalki henrick) ಹಾಗೂ ಅಮೇರಿಕಾದ ಎಸ್ಸಾ ಜೆಸ್ನಿಯಾ(yessa jesneya) ಇಬ್ಬರು ಭಾರತೀಯ ಸಂಸ್ಕೃತಿ ವೇದಗಳ ಅಧ್ಯಯಾನಕ್ಕಾಗಿ ಮೈಸೂರಿಗೆ ಬಂದು ಇಲ್ಲಿನ ಪ್ರಾಚೀನ ಭಾರತೀಯ ಸಂಪ್ರದಾಯಗಳ ಅಧ್ಯಯನವನ್ನ ಮಾಡುವ ಸಂಧರರ್ಭದಲ್ಲಿ ಕರ್ನಾಟಕದ ಸಂಪ್ರದಾಯಗಳು, ಪದ್ದತಿಗಳ ಕುರಿತು ಅಧ್ಯಯನ ಮಾಡುತ್ತಿರುವಾಗ ಕರ್ನಾಟಕದಲ್ಲಿ ರಾಜ ಮನೆತನಗಳಲ್ಲಿ ಮದುವೆ ನಿಶ್ಚಿತಾರ್ಥ ಶಾಸ್ತ್ರಗಳ ಬಗ್ಗೆ ಅಧ್ಯಯನ ಮಾಡಿ ಈ ಶಾಸ್ತ್ರದ ಪ್ರಭಾವಕ್ಕೆ ಒಳಗಾಗಿ ಇದರಂತೆ ನಾವು ಸಹ ನಿಶ್ಚಿತಾರ್ಥ ಮಾಡಿಕೊಳ್ಳಬೇಕೆಂದು ನಿಶ್ಚಯಿಸಿದರು.
ಅದರಂತೆ ಫೆಬ್ರವರಿ 27ರ ಸಂಜೆ ಸೋಮವಾರ ಮೈಸೂರಿನ ಮನೆಯೊಂದರಲ್ಲಿ ಇಲ್ಲಿಯ ಸಂಪ್ರದಾಯದಂತೆ ನಿಶ್ಚಿತಾರ್ಥ ಶಾಸ್ತ್ರವನ್ನ ಮಾಡಿಕೊಂಡು ಇಬ್ಬರು ಅಮೇರಿಕಕ್ಕೆ ಹೋದರು. ಅಲ್ಲಿ ಅದ್ದೂರಿಯಾಗಿ ಇಬ್ಬರು ಮದುವೆಯಾಗಲು ನಿಶ್ಚಿಯಸಿದ್ದು, ಮದುವೆ ಶಾಸ್ತ್ರವನ್ನ ಹಿಂದೂ ಧರ್ಮದ ರೀತಿ ಮಾಡುವುದಾಗಿ ಹೆನ್ರಿಕ್ ತಿಳಿಸಿದ್ದಾರೆ.