ಮೈಸೂರು: ಭಾರತದ ಎರಡನೇ ರಾಜ್ಯದ ಮೊದಲ ಸಂಗೀತ ವಿವಿ ಎಂಬ ಹೆಗ್ಗಳಿಕಿಗೆ ಪಾತ್ರವಾಗಿರುವ ಮೈಸೂರಿನ ಸಂಗೀತ ವಿವಿ ತನ್ನ ಎರಡನೇ ಘಟಿಕೋತ್ಸವದಲ್ಲಿ ಮೂರು ಜನ ಗಣ್ಯರಿಗೆ ಗೌರವ ಡಾಕ್ಟರೆಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಗೀತ ವಿವಿಯ ಕುಲಪತಿ ಡಾ.ಸರ್ವಮಂಗಳ ಶಂಕರ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಡಾಕ್ಟರ್ ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಯ ವಿವಿಯ ಎರಡನೇ ಘಟಿಕೋರತ್ಸವ ನಾಳೆ ನಡೆಯಲಿದ್ದು, ಈ ಬಾರಿ ಮೂರು ಜನ ಗಣ್ಯರಾದ ಕರ್ನಾಟಕ ಸಂಗೀತ ಗಾಯನ ಕ್ಷೇತ್ರದ ಸಾಧನೆಗಾಗಿ ಪ್ರೋ ಗೌರಿ ಕುಪ್ಪ ಸ್ವಾಮಿ, ಹಿಂದೂಸ್ತಾನಿ ಸಂಗೀತ ವಯೋಲಿನ ವಾದಕಿ ಪ್ರೊ.ಎನ್ ರಾಜಂ, ರಂಗಭೂಮಿ ಕಲಾವಿದ ನಾಡೋಜ ಏಣಗಿ ಬಾಳಪ್ಪ ಅವರಿಗೆ ಗೌರವ ಡಾಕ್ಟರೆಟ್ ನೀಡಲು ನಿರ್ಧರಿಸಲಾಗಿದೆ.
ನಾಳೆ 11.30ಕ್ಕೆ ನಿತ್ಯೋತ್ಸವ ಸಭಾಂಗಣದಲ್ಲಿ ಪೀಟಿಲು ವಾದಕ ಎಲ್.ಸುಬ್ರಮಣಿಯಂ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ ವಜೂಭಾಯಿ ರೂಡಾವಾಲಾ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದು ಈ ಬಾರಿ 47 ವಿದ್ಯಾರ್ಥಿಗಳಿಗೆ ಪದವೀ ನೀಡಲಿದ್ದು, 17 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಮೂರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು. ಮೊದಲ ಬಾರಿಗೆ 9 ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗುತ್ತಿದೆ ಎಂದು ಸಂಗೀತ ವಿವಿಯ ಕುಲಪತಿ ಡಾ.ಸರ್ವಮಂಗಳ ಶಂಕರ್ ತಿಳಿಸಿದ್ದಾರೆ.