ಮೈಸೂರು: ಸಚಿವ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದು ಮುಂದಿನ ವಿಚಾರಣೆಯನ್ನೆ ಇದೇ ತಿಂಗಳ 14ಕ್ಕೆ ಮುಂದೂಡಿ ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ ನೀಡಿದೆ.
ಮರಳು ಗಣಿಗಾರಿಕೆಗೆ ಪರವಾನಗಿ ನೀಡಲು ಲಂಚ ಪಡೆಯುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಲಂಚ ಪಡೆಯುವಂತೆ ಒತ್ತಡ ಹೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಮುಂದಿನ ವಿಚಾರಣೆಯನ್ನ ನ್ಯಾಯಾಲಯವೂ ಮಾರ್ಚ್ 14ಕ್ಕೆ ಮುಂದೂಡಿದೆ.
ಇಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕೆಂದು ನ್ಯಾಯಾಲಯ ಆದೇಶ ಮಾಡಿದ ಹಿನ್ನಲ್ಲೆಯಲ್ಲಿ ನ್ಯಾಯಲಯಕ್ಕೆ ತಮ್ಮ ವಕೀಲರ ಮೂಲಕ ಹಾಜರಾದ ಸಚಿವರ ಪುತ್ರ ಸುನೀಲ್ ಬೋಸ್ ಮಾರ್ಚ್ 14 ರಂದು ಖುದ್ದು ನ್ಯಾಯಲಯಕ್ಕೆ ಹಾಜರಬೇಕೆಂದು ನ್ಯಾಯಾಧೀಶರು ಇಂದು ಆದೇಶ ನೀಡಿದ್ದಾರೆ.