ಮೈಸೂರು: ಕುಡಿದ ಮತ್ತಿನಲ್ಲಿ ಸರಸಕ್ಕೆ ಬಾ ಎಂದು ಮೊಬೈಲ್ ನಲ್ಲಿ ಮೇಸೆಜ್ ಮಾಡಿ ಕಛೇರಿ ಬಳಿ ಬಂದ ಮಾಜಿ ಪ್ರಿಯಕರನಿಗೆ ಮಹಿಳೆ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ನಗರದ ಮಾಹಾನಗರ ಪಾಲಿಕೆ ಕಛೇರಿಯ ಮುಂಬಾಗ ನಡೆದಿದೆ.
ಮೈಸೂರು ನಗರ ಪಾಲಿಕೆ ಕಚೇರಿಯಲ್ಲಿ ಚುನಾವಣಾ ವಿಭಾಗದಲ್ಲಿ ಕೆಲಸ ಮಾಡಿತ್ತಿರುವ ಗಾಯತ್ರಿಗೆ ಮಾಜಿ ಪ್ರಿಯಕರ ಯತಿರಾಜ ಎಂಬಾತ ಪ್ರತಿದಿನ ಕುಡಿದ ಮತ್ತಿನಲ್ಲಿ ಮೆಸೇಜ್ ಮಾಡಿ ಸರಸಕ್ಕೆ ಬಾ ಎಂದು ಪೀಡಿಸುತ್ತಿದ್ದ. ಇದಕ್ಕೆ ಗಾಯತ್ರಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮಾಜಿ ಪ್ರಿಯಕರ ಯತಿರಾಜ್ ಪಾಲಿಕೆ ಕಚೇರಿಗೆ ಬಂದು ಕಾಟ ಕೊಡಲು ಪ್ರಾರಂಭಿಸಿದ.
ಇದರಿಂದ ಬೇಸತ್ತ ಗಾಯತ್ರಿ ಪಾಲಿಕೆ ಆವರಣದಲ್ಲೇ ಸಾರ್ವಜನಿಕರೆದುರೇ ಯತಿರಾಜನಿಗೆ ಕಾಲು, ಚಪ್ಪಲಿಯಿಂದ ಹಾಗೂ ಹೆಲ್ಮೆಟ್ ನಿಂದ ಮನಬಂದಂತೆ ಥಳಿಸಿದ್ದಾಳೆ. ಇನ್ನೂ ಪತಿ ನಿಧನರಾದ ಹಿನ್ನೆಲೆಯಲ್ಲಿ ಅನುಕಂಪ ಆಧಾರದ ಮೇಲೆ ಗಾಯತ್ರಿ ನಗರಪಾಲಿಕೆಯಲ್ಲಿ ಕೆಲಸ ಸಿಕಿದ್ದು ಇದಕ್ಕೆ ಯತಿರಾಜ್ ಕೆಲಸ ಕೊಡಿಸಲು ಸಹಾಯ ಮಾಡಿದ ಎನ್ನಲಾಗಿದ್ದು ಆ ಸಂಧರ್ಭದಲ್ಲಿ ನನಗೆ ಗಂಡ ಸತ್ತಿರುವುದರಿಂದ ನಿನನ್ನ ಮದುವೆಯಾಗುತ್ತೇನೆ ಎಂದು ಮಾತು ಕೊಟ್ಟಿದಳು, ಜೊತೆಗೆ ಪ್ರತಿದಿನವೂ ಫೋನ್ ನಲ್ಲಿ ಮಾತನಾಡುತ್ತಿದಳು ಎಂದು ಗೂಸಾ ತಂದ ಯತಿರಾಜ್ ತಡಬಡಿಸುತ್ತಿದ್ದು ಕಂಡು ಬಂತು.