ಮೈಸೂರು: ಸಾಯುವ ಮುನ್ನ ನಟ ಶಿವರಾಜ್ ಕುಮಾರ್ ಅವರನ್ನ ನೋಡಬೇಕೆಂಬ ಆಸೆಯನ್ನ ಹೊಂದಿದ್ದ ಯುವಕನನ್ನ ವಿಶೇಷ ಅಂಬುಲೆನ್ಸ್ ವ್ಯವಸ್ಥೆ ಮಾಡಿ ಶಿವರಾಜ್ ಕುಮಾರ್ ಶೂಟಿಂಗ್ ನಡೆಯುತ್ತಿರುವ ಸ್ಥಳಕ್ಕೆ ಕರೆಸಿಕೊಂಡಿದ್ದು, ತನ್ನ ನೆಚ್ಚಿನ ನಟನನ್ನು ನೋಡುವ ಆಸೆಯಿಂದ ಯುವಕ ಅಂಬುಲೆನ್ಸ್ ಏರಿ ಹೊರಟಿದ್ದಾನೆ.
ಎರಡು ಕಿಡ್ನಿ ವೈಫಲ್ಯದಿಂದ ಸಾವಿನ ಸಮೀಪದಲ್ಲಿರುವ ಹೆಚ್.ಡಿ ಕೋಟೆ ತಾಲೂಕಿನ ಆಲನಹಳ್ಳಿಯ ಯುವಕ ಜಯಕುಮಾರ್(19) ತಾನು ಸಾಯುವ ಮುನ್ನ ನಟ ಶಿವರಾಜ್ ಕುಮಾರ್ ನೋಡಬೇಕೆಂಬ ಆಸೆಯನ್ನ ಮಾಧ್ಯಮದ ಮೂಲಕ ವ್ಯಕ್ತಪಡಿಸಿದ್ದು, ಇದನ್ನ ತಿಳಿದ ಶಿವರಾಜ್ ಕುಮಾರ್ ತಮ್ಮ ಬಿಡುವಿಲ್ಲದ ಶೂಟಿಂಗ್ ನಡುವೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ವಿಶೇಷ ಅಂಬುಲೆನ್ಸ್ ವ್ಯವಸ್ಥೆ ಮಾಡಿ ತಮ್ಮ ಟಗರು ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಜಾಲಹಳ್ಳಿಗೆ ಕರೆಸಿಕೊಂಡಿದ್ದು ಯುವಕನೊಂದಿಗೆ ಅರ್ಧ ಗಂಟೆ ಕಾಲ ಕಳೆದು ಆತನಿಗೆ ಚಿಕಿತ್ಸಾ ವೆಚ್ಚ ಭರವಸೆ ನೀಡಿ ವಾಪಸ್ಸ್ ಅದೇ ವಿಶೇಷ ಅಂಬುಲೆನ್ಸ್ ನಲ್ಲಿ ವಾಪಸ್ಸ್ ಕಳುಹಿಸಲಿದ್ದಾರೆ.
ಇಂದು ಬೆಳಗ್ಗೆಯಿಂದನೇ ಶಿವರಾಜ್ ಕುಮಾರ್ ನೋಡುವ ಆಸೆಯಿಂದ ಲವಲವಿಕೆಯಿಂದ ಇದ್ದ ಜಯಕುಮಾರ್ ಆಸೆಯಿಂದ ಅಂಬುಲೆನ್ಸ್ ಏರಿ ಕುಟುಂಬ ಸಮೇತ ಬೆಂಗಳೂರು ಕಡೆ ಹೊರಟರು.