News Kannada
Monday, November 28 2022

ಮೈಸೂರು

ನಿವೃತ್ತ ಪ್ರೊಫೆಸರ್ ರಾಮ ಪ್ರಸಾದ್ ರವರಿಂದ ಮುಂದಿನವಾರ ಕುಕ್ಕರಹಳ್ಳಿ ಕೆರೆ ಸ್ಥಳ ಪರಿಶೀಲನೆ - 1 min read

Photo Credit :

ನಿವೃತ್ತ ಪ್ರೊಫೆಸರ್ ರಾಮ ಪ್ರಸಾದ್ ರವರಿಂದ ಮುಂದಿನವಾರ ಕುಕ್ಕರಹಳ್ಳಿ ಕೆರೆ ಸ್ಥಳ ಪರಿಶೀಲನೆ

ಮೈಸೂರು: ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಯನ್ನು ಮೈಸೂರು ವಿಶ್ವ ವಿದ್ಯಾನಿಲಯ ವತಿಯಿಂದ ಕೈಗೆತ್ತಿಕೊಂಡಿರುವುದನ್ನು ಆಕ್ಷೇಪಿಸಿ ಪರಿಸರವಾದಿಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಪರಿಶೀಲನೆಗಾಗಿ ಐಐಎಸ್ಸಿ ನಿವೃತ್ತ ಪ್ರೊಫೆಸರ್ ರಾಮ ಪ್ರಸಾದ್ ಹಾಗೂ ನಿವೃತ್ತ ಮುಖ್ಯ ಅಭಿಯಂತರ ಸಿ.ಎನ್.ಬಾಬು ಇಬ್ಬರು ಪರಿಣಿತರನ್ನು ನೇಮಕ ಮಾಡಲಾಗಿದೆ.

ಈ ಇಬ್ಬರು ಪರಿಣಿತರು ಮಾರ್ಚ್ ಹದಿನಾಲ್ಕರಂದು ಬೆಳಿಗ್ಗೆ ಕುಕ್ಕರಹಳ್ಳಿ ಕೆರೆಯ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಪರಿಶೀಲನೆ ಸಂದರ್ಭದಲ್ಲಿ  ಶ್ರೀ ಜಯಚಾಮರಾಜೇಂದ್ರ ಮೃಗಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್, ಮೈಸೂರು ವಿಶ್ವವಿದ್ಯಾನಿಲಯದ ಮನೋವಿಜ್ಞಾನ ವಿಭಾಗದ ಡಾ. ಮೇವಾಸಿಂಗ್, ಸಸ್ಯಶಾಸ್ತ್ರ ವಿಭಾಗದ ಪ್ರೊ. ಜಿ.ಆರ್. ಜನಾರ್ಧನ್, ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಸಲಹಾ ಸಮಿತಿ ಸಂಚಾಲಕ ಕೆ.ಎನ್.ಜಯರಾಮಯ್ಯ, ಸದಸ್ಯ ಯು.ಎನ್. ರವಿಕುಮಾರ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ತಾಂತ್ರಿಕ ವಿಭಾಗದ ಕಾರ್ಯಪಾಲಕ ಅಭಿಯಂತರರು ಭಾಗವಹಿಸಲಿದ್ದಾರೆ.

See also  ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಎಸ್ ವೈ ಪುತ್ರ ಮತಯಾಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು