ಮೈಸೂರು: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಹೆದರಿರುವ ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರಗಳ ಉಪಚುನಾವಣೆಯನ್ನ ಶತಾಯಗತಾಯ ಗೆಲಲ್ಲು ಹೊಸ ಚುನಾವಣಾ ರಣತಂತ್ರವನ್ನ ರಚಿಸಿದ್ದು ಅದರ ಡಿಟೈಲ್ಸ್ ಇಲ್ಲಿದೆ.
2018ರ ಸಾರ್ವತ್ರಿಕ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ತನ್ನ ಕ್ಷೇತ್ರದ ಉಪಚುನಾವಣೆಯನ್ನ ಗೆಲ್ಲಲು ಆಡಳಿತ ಯಂತ್ರವನ್ನೇ ಉಪಚುನಾವಣೆ ನಡೆಯುವ ಕ್ಷೇತ್ರಕ್ಕೆ ನಿಯೋಜನೆ ಮಾಡಿದ್ದು, ಅದರಂತೆ ನಂಜನಗೂಡು ಕ್ಷೇತ್ರಕ್ಕೆ 75ಜನ ಶಾಸಕರು ಮತ್ತು ಪರಿಷತ್ ಸದಸ್ಯರು, ಗುಂಡ್ಲುಪೇಟೆ ಕ್ಷೇತ್ರಕ್ಕೆ 75 ಶಾಸಕರು ಮತ್ತು ಪರಿಷತ್ ಸದಸ್ಯರನ್ನ ನಿಯೋಜನೆ ಮಾಡಲು ಪ್ಲಾನ್ ರೂಪಿಸಿದ್ದಾರೆ.
ಜಾತಿ ಆಧಾರದ ಮೇಲೆ ಜವಬ್ದಾರಿ:
ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಜಾತಿ ಆದಾರದ ಮೇಲೆ ಆಯಾ ಜಾತಿಯ ಮುಖಂಡರನ್ನ ಮನವೊಲಿಸಲು ಆಯಾ ಜಾತಿಯ ಶಾಸಕರಿಗೆ ವಹಿಸಲಾಗಿದ್ದು, ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನ ಒದಗಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಅಲ್ಲದೆ ನಂಜನಗೂಡು ಕ್ಷೇತ್ರದಲ್ಲಿ ಬರುವ 33 ಗ್ರಾಮ ಪಂಚಯತಿಗೆ ಒಬ್ಬೊಬ್ಬ ಸಚಿವರಿಗೆ ಉಸ್ತುವಾರಿ ವಹಿಸಲಾಗಿದ್ದು, ಕ್ಷೇತ್ರದ ಎಲ್ಲಾ ಜವಬ್ದಾರಿಯನ್ನ ಜಿಲ್ಲಾ ಉಸ್ತುವಾರಿಯನ್ನ ಡಾ.ಹೆಚ್.ಸಿ ಮಹದೇವಪ್ಪ ಹಾಗೂ ಸಂಸದ ಧ್ರುವನಾರಾಯಣ್ ಗೆ ವಹಿಸಲಾಗಿದೆ.
ಜೆಡಿಎಸ್ ಜೊತೆ ಒಳ ಒಪ್ಪಂದ:
ನಂಜನಗೂಡು ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ನಾಯಕ ಕಳಲೇ ಕೇಶವಮೂರ್ತಿ ಕಾಂಗ್ರೆಸ್ ಸೇರ್ಪಡೆ ಹಿನ್ನಲ್ಲೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಗೆ ಅಸ್ತಿತ್ವವೇ ಇಲ್ಲವಾಗಿದೆ. ಈ ಹಿನ್ನಲ್ಲೆಯಲ್ಲಿ ಉಪಚುನಾವಣೆಯಲ್ಲಿ ಅಭ್ಯರ್ಥಿ ಹಾಕುವ ಸ್ಥಿತಿ ಜೆಡಿಎಸ್ ಇಲ್ಲ. ಜೊತೆಗೆ ಕೇಶವಮೂರ್ತಿ ಜೆಡಿಎಸ್ ವರಿಷ್ಟ ದೇವೇಗೌಡರ ಆಶೀರ್ವಾದ ಇರುವುದರಿಂದ ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಿದರೆ ಬಿಜೆಪಿಗೆ ಲಾಭ ಇರುವುದರಿಂದ ಈ ಹಿನ್ನಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ಹಾಕಲು ಹಿಂದೇಟು ಹಾಕುತ್ತಿದೆ.