ಮೈಸೂರು: ಮರಳು ಗಣಿಗಾರಿಕೆಗೆ ಲಂಚ ಪಡೆಯಲು ಪ್ರೇರೆಪಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಸಚಿವರ ಪುತ್ರ ಸೇರಿದಂತೆ ಎಲ್ಲಾ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದು ಮುಂದಿನ ವಿಚಾರಣೆಯನ್ನ ನ್ಯಾಯಾಧೀಶರು ಮಾರ್ಚ್ 21ಕ್ಕೆ ಮುಂದೂಡಿದರು.
ಹಿರಿಯ ಭೂ ವಿಜ್ಞಾನಿ ಆಲ್ಫೋನ್ಸಿಸ್ ಅವರಿಗೆ ಸಚಿವ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಮರಳು ಪರವಾನಿಗೆ ನೀಡಲು ಲಂಚ ಪಡೆಯುವಂತೆ ಪ್ರೇರಪಿಸಿದ ಪ್ರಕರಣದ ವಿಚಾರಣೆ ಇಂದು ಮೈಸೂರಿನ 3ನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಇತ್ತು. ಆದರೆ ವಿಚಾರಣೆಯನ್ನ ನಡೆಸದಂತೆ ಸಚಿವರ ಪುತ್ರ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಮಾರ್ಚ್ 16ರಂದು ಈ ಅರ್ಜಿ ಕೋರ್ಟನಲ್ಲಿ ಇರುವುದರಿಂದ ಇಂದಿನ ವಿಚಾರಣೆಯನ್ನ ಮಾರ್ಚ್ 21ಕ್ಕೆ ನ್ಯಾಯಾಧೀಶ ಸುದೀಂದ್ರನಾಥ್ ಮುಂದೂಡಿದರು.
ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು:
ಇಂದು ಮೈಸೂರಿನ 3ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಸಚಿವರ ಪುತ್ರ ಸುನೀಲ್ ಬೋಸ್ 2ನೇ ಆರೋಪಿ ರಾಜು ಹಾಗೂ ಭೂ ವಿಜ್ಞಾನಿ ಆಲ್ಫೋನ್ಸಿಸ್ ನ್ಯಾಯಾಲಯಕ್ಕೆ ಹಾಜರಿದ್ದು ನ್ಯಾಯಾಲಯವೂ ಈ ಮೂವರನ್ನ ಆರೋಪಿಗಳೆಂದು ಪರಿಗಣಿಸಿದ ಹಿನ್ನಲ್ಲೆಯಲ್ಲಿ ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಾಗಿತ್ತು. ಆದರೆ ಹೈಕೋರ್ಟ್ ನಲ್ಲಿ ಈ ಆದೇಶವನ್ನ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ವಿಚಾರಣೆಯಿಂದ ಮಾರ್ಚ್ 21ಕ್ಕೆ ಪ್ರಕರಣ ಮೂಂದೂಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.