ಮೈಸೂರು: ಚಾಮರಾಜನಗರ ಎಸ್ಪಿ ಸಂಚರಿಸುತ್ತಿದ್ದ ಸರ್ಕಾರಿ ಇನ್ನೊವಾ ಕಾರಿಗೆ ತಿರುವಿನಲ್ಲಿ ರಭಸವಾಗಿ ಬಂದ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಎಸ್ಪಿ ಕಾರು ಸಂಪೂರ್ಣ ಜಖಂಗೊಂಡಿದ್ದು ಪವಾಡ ರೀತಿಯಲ್ಲಿ ಎಸ್ಪಿ ಹಾಗೂ ಡ್ರೈವರ್ ಪಾರಾಗಿದ್ದಾರೆ.
ಚಾಮರಾಜನಗರದ ಎಸ್ಪಿ ಕುಲದೀಪ್ ಕುಮಾರ್ ಜೈನ್ ನರಸೀಪುರ ಮಾರ್ಗವಾಗಿ ಮೈಸೂರಿಗೆ ಬರುತ್ತಿರುವ ವೇಳೆ ರಂಗಸಮುದ್ರದಿಂದ ಮೈಸೂರು ಕಡೆ ಬರುತ್ತಿದ ಟಾಟಾ ಸುಮೋ ಎಡೆತೊರೆ ಗೇಟ್ ಬಳಿ ತಿರುವಿನಲ್ಲಿ ರಭಸವಾಗಿ ಬಂದು ನಿಯಂತ್ರಣಕ್ಕೆ ಬಾರದೆ ಎಸ್ಪಿ ಇನ್ನೊವಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇನ್ನೊವಾ ಕಾರ್ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ಹಾಗೂ ಎಸ್ಪಿ ಪವಾಡ ರೀತಿಯಲ್ಲಿ ಪಾರಾಗಿದ್ದು ಎಸ್ಪಿ ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಟಾಟಾ ಸುಮೋದಲ್ಲಿದ್ದ ಜನರಿಗೂ ಸಣ್ಣ ಪುಟ್ಟ ಗಾಯಗಳಾಗಿದೆ. ಸ್ಥಳಕ್ಕೆ ದೌಡಾಯಿಸಿದ ಟಿ.ನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟಾಟಾ ಸುಮೋ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.