ಮೈಸೂರು: ನಂಜನಗೂಡು ಉಪಚುನಾವಣೆಯಲ್ಲಿ ಮತದಾರನನ್ನ ಸೆಳೆಯಲು ರಾತ್ರೋರಾತ್ರಿ 20 ಸಾವಿರ ಬಿಪಿಎಲ್ ಕಾರ್ಡ್ ಗಳನ್ನ ಸೀಮೆಎಣ್ಣೆ ವ್ಯಾಪ್ತಿಗೆ ಸೇರಿಸಿ ಚುನಾವಣಾ ನೀತಿ ಸಂಹಿತೆಯನ್ನ ಉಲ್ಲಂಘಿಸಲಾಗಿದೆ ಎಂದು ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ವಿವರ ಕೇಳಿದೆ.
ಏನಿದು ಘಟನೆ?
ನಂಜನಗೂಡು ಉಪಚುನಾವಣೆಯನ್ನ ಶತಯಾಗತಾಯ ಗೆಲಲ್ಲು ಸಿಎಂ ಸಿದ್ದರಾಮಯ್ಯ ನಾನಾ ವಾಮಮಾರ್ಗಗಳನ್ನ ಹುಡುಕುತಿದ್ದು, ನಂಜನಗೂಡು ವ್ಯಾಪ್ತಿಯಲ್ಲಿ ಮಾರ್ಚ್ 9 ರಿಂದ 12 ರವರೆಗೆ 21,011 ಬಿಪಿಎಲ್ ಕಾರ್ಡ್ ದಾರರಿಗೆ ಸೀಮೆಎಣ್ಣೆ ನೀಡಲು ಅವರ ಹೆಸರನ್ನ ಸೇರಿಸಿದ್ದು, ಉಪಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇದೊಂದು ಚುನಾವಣೆಯಲ್ಲಿ ಮತದಾರರನ್ನ ಸೆಳೆಯಲು ತಂತ್ರ ಎಂಬ ದೂರಿನ ಹಿನ್ನಲ್ಲೆಯಲ್ಲಿ ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಆನಿಲ್ ಕುಮಾರ್ ಜಾ ಈ ಬಗ್ಗೆ ವಿವರ ನೀಡುವಂತೆ ಮೈಸೂರಿನ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಆದೇಶ ಹಿಂಪಡೆದ ಜಿಲ್ಲಾ ಆಹಾರ ಇಲಾಖೆ:
ಜಿಲ್ಲೆಯಲ್ಲಿ 7 ಲಕ್ಷ ಎಲ್ ಪಿಜಿ ಬಳಕೆದಾರರಿದ್ದು ಈ ಹಿನ್ನಲ್ಲೆಯಲ್ಲಿ ಅಷ್ಟು ಜನರನ್ನ ಸೀಮೆಎಣ್ಣೆ ವ್ಯಾಪ್ತಿಯಿಂದ ಕೈಬಿಡಲಾಗಿತ್ತು. ಇದರಿಂದ ಕಳೆದ ಡಿಸೆಂಬರ್ ತಿಂಗಳನಲ್ಲಿ ಈ ಬಗ್ಗೆ ಬಿಪಿಎಲ್ ಕಾರ್ಡ್ ದಾರರು ನಮಗೆ ಸೀಮೆಎಣ್ಣೆಯನ್ನ ನಿಲ್ಲಿಸಿದ್ದೇಕೆ ಮತ್ತೇ ನೀಡುವಂತೆ ಮನವಿ ಸಲ್ಲಿಸಿದರು.
ಅದರಂತೆ ನಂಜಗೂಡಿನ ತಾಲೂಕಿನಿಂದ 21,011 ಬಿಪಿಎಲ್ ಕಾರ್ಡ್ ದಾರರು ಸೀಮೆಎಣ್ಣೆ ನೀಡುವಂತೆ ಆರ್ಜಿ ಸಲ್ಲಿಸಿದ ಹಿನ್ನಲ್ಲೆಯಲ್ಲಿ ಅವರನ್ನ ಸೀಮೆಎಣ್ಣೆ ವಿತರಿಸಿವ ವ್ಯಾಪ್ತಿಗೆ ಸೇರಿಸಿದ್ದು, ಇದು ಮಾರ್ಚ್ 9 ರಿಂದ ಆರಂಭವಾಗಿದ್ದು ಆ ಸಮಯದಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಲಿದ್ದ ಕಾರಣ ಚುನಾವಣಾ ಆಯೋಗದ ಆಕ್ಷೇಪಣೆ ಮೇರೆಗೆ, ಆಲ್ ಲೈನ್ ನಲ್ಲಿ ವಾಪಸ್ಸ್ ಪಡೆಯಲಾಗಿದೆ. ಚುನಾವಣೆ ಮುಗಿದ ನಂತರ ಪುನಃ ಈ ಪಟ್ಟಿಯನ್ನ ವಾಪಸ್ಸ್ ಸೇರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸಾರಬರಾಜು ಇಲಾಖೆಯ ಉಪನಿರ್ದೇಶಕ ಸ್ಪಷ್ಟ ಪಡಿಸಿದ್ದಾರೆ.