ಮೈಸೂರು: ಎರಡು ರಾಷ್ಟ್ರೀಯಾ ಪಕ್ಷಗಳು ಜಿದ್ದಾ ಜಿದ್ದಿನಿಂದ ಉಪಚುನಾವಣೆ ನಡೆಸುತ್ತಿದ್ದು ಹಣಕಾಸಿನ ತೊಂದರೆಯಿಂದ ಜೆಡಿಎಸ್ ಉಪಚುನಾವಣೆಯಲ್ಲಿ ಸ್ಫರ್ಧೆ ಮಾಡುತ್ತಿಲ್ಲ ಎಂದು ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಇನ್ನು ಆರು ತಿಂಗಳಲ್ಲೇ ಸಾರ್ವತ್ರಿಕ ಚುನಾವಣೆ ಬರಲಿದ್ದು, ಉಪಚುನಾವಣೆಯಲ್ಲಿ ಸ್ಪರ್ಧೇ ಮಾಡುವುದು ಅರ್ಥವಿಲ್ಲ. ಜೊತೆಗೆ ಎರಡು ರಾಷ್ಟ್ರೀಯಾ ಪಕ್ಷಗಳು ಜಿದ್ದಾಜಿದ್ದಿನಿಂದ ಉಪಚುನಾವಣೆ ನಡೆಸುತ್ತಿದ್ದು ನಮಗೆ ಹಣಕಾಸಿನ ಶಕ್ತಿಯಿಲ್ಲ, ಆದ್ದರಿಂದ ಎರಡು ಉಪಚುನಾವಣೆಯಲ್ಲಿ ಜೆಡಿಎಸ್ ಸ್ಫರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ ದೇವೇಗೌಡರು, ಈ ಉಪಚುನಾವಣೆ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದು ಬಿಂಬಿಸಲಾಗುತ್ತಿದೆ. ಆದರೆ ದಿಕ್ಸೂಚಿ ಅಲ್ಲ, ಅದೊಂದು ಎರಡು ರಾಜಕೀಯ ಪಕ್ಷಗಳ ಭ್ರಮೆ ಎಂದು ವ್ಯಂಗ್ಯವಾಡಿದರು.
ಉಪಚುನಾವಣೆಯಲ್ಲಿ ಜೆಡಿಎಸ್ ಯಾರಿಗೂ ಬೆಂಬಲ ನೀಡುವುದಿಲ್ಲ, ನಾವು ತಟಸ್ಥವಾಗಿರುತ್ತೇವೆ ಎಂದು ತಿಳಿಸಿದ ಅವರು, ದೇಶದ ಇಂದಿನ ಚುನಾವಣೆಗಳಲ್ಲಿ ಅಕ್ರಮ ತಡೆಯಲು ಸಾಧ್ಯವಿಲ್ಲ. ಇತ್ತೀಚಿಗೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮೋದಿ ಹಣ ಖರ್ಚು ಮಾಡಿ ಗೆಲ್ಲಲಿಲ್ಲವೇ.. ಎಂಬುದನ್ನ ಮೋದಿಯೇ ಸತ್ಯ ಹೇಳಲಿ ಎಂದು ಸಾವಲು ಹಾಕಿದರು.
ಜೆಡಿಎಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಬಿ.ಎಸ್ ಯಡಿಯೂರಪ್ಪ ಅವರ ಹೇಳಿಕೆ ಊಹಾಪೋಹವಷ್ಟೆ. ನಿನ್ನೆ ಜೆಡಿಎಸ್ ನೂತನ ಕಛೇರಿ ಜೆ.ಪಿ ಭವನ ಉದ್ಘಾಟನೆಯ ಪೂಜೆಯಲ್ಲಿ ದಿನವೀಡೀ ಇದ್ದು ಬಜೆಟ್ ಏನಾಗಿದೆ ಎಂಬ ಬಗ್ಗೆ ಗೊತ್ತಿಲ್ಲ. ಆದ್ದರಿಂದ ಬಜೆಟ್ ಹಾಗೂ ರೈತರ ಸಾಲ ಮನ್ನ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಇದೇ ಸಂಧರ್ಭದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಜೆಡಿಎಸ್ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೇ ಮಾಡಿಲಿದೆ ಎಂದು ತಿಳಿಸಿದರು.