News Kannada
Monday, February 06 2023

ಮೈಸೂರು

ಗೋ.ಮಧುಸೂಧನ್ ರವರ ಬಂಡೀಪುರ ರೆಸಾರ್ಟ್ ತೆರವು!

Photo Credit :

ಗೋ.ಮಧುಸೂಧನ್ ರವರ ಬಂಡೀಪುರ ರೆಸಾರ್ಟ್ ತೆರವು!

ಮೈಸೂರು: ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದ ಹಿನ್ನಲೆಯಲ್ಲಿ ಬಂಡೀಪುರದ ಅಭಯಾರಣ್ಯ ವ್ಯಾಪ್ತಿಯಲ್ಲಿ ಭೂಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸಿ ಭೂಮಿ ಖರೀದಿ ಮಾಡಿ ಅದರಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ರೆಸಾರ್ಟ್ ಅನ್ನು ತೆರವುಗೊಳಿಸುವ ಕಾರ್ಯಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಬಿಜೆಪಿಯ ಮುಖಂಡ, ಮಾಜಿ ಎಂಎಲ್ಸಿ ಆಗಿರುವ ಗೋ.ಮಧುಸೂದನ್ ಅವರಿಗೆ ಸೇರಿದ ಟೈಗರ್ ರಾಂಚ್ ರೆಸಾರ್ಟ್ ನ್ನು ತೆರವು ಮಾಡಲಾಗುತ್ತಿದ್ದು, ಸುಮಾರು 40 ಎಕರೆ ಪ್ರದೇಶದೊಳಗೆ ಈ ರೆಸಾರ್ಟ್ ನಿರ್ಮಾಣವಾಗಿತ್ತು. ಬಂಡೀಪುರ ಹುಲಿಯೋಜನೆಯಡಿ ಕೃಷಿ ಹೊರತುಪಡಿಸಿ ಯಾವುದೇ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಿಸುವಂತಿಲ್ಲ ಎಂಬ ಕಾನೂನು ಇದ್ದರೂ ಅದನ್ನು ಉಲ್ಲಂಘಿಸಿ ರೆಸಾರ್ಟ್ ನಿರ್ಮಾಣ ಮಾಡಲಾಗಿತ್ತು.

ತಮ್ಮ ಹಾಗೂ ಸಂಬಂಧಿ ಟಿ.ಎಲ್.ಜಯಲಕ್ಷ್ಮಿ ಹೆಸರಿನಲ್ಲಿ ಹಂಗಳ ಹೋಬಳಿಯ ಮಂಗಲ ಗ್ರಾಮದ ಬಳಿ ಕೃಷಿ ಉದ್ದೇಶಕ್ಕಾಗಿ 40 ಎಕರೆ ಭೂಮಿಯನ್ನು ಖರೀದಿಸಿದ್ದರು. ಇದಕ್ಕೆ ಮೂಲತಃ ವ್ಯವಸಾಯಗಾರರೆಂದು ಸುಳ್ಳು ಪ್ರಮಾಣಪತ್ರ ನೀಡಿ 1961ರ ಭೂಸುಧಾರಣಾ ಕಾಯ್ದೆ 80ರನ್ವಯ 1995ರಲ್ಲಿ ನಂಜನಗೂಡು ಉಪವಿಭಾಗಾಧಿಕಾರಿಗಳಿಂದ ಅನುಮತಿ ಪಡೆದಿದ್ದರು. ಆದರೆ ಅರಣ್ಯ ಇಲಾಖೆಯ ಆನುಮತಿಯನ್ನೂ ಪಡೆದುಕೊಳ್ಳದೆ, ಸಕರ್ಾರದ ಗಮನಕ್ಕೇ ತಾರದೆ ಅಂದಿನ ಉಪವಿಭಾಗಾಧಿಕಾರಿಗಳು ಈ ಭೂಮಿಯನ್ನು ಅನ್ಯಾಕ್ರಾಂತ ಮಾಡಿಕೊಟ್ಟಿದ್ದರು. ತಾವು ಖರೀದಿಸಿದ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದರು. ಈ ಬಗ್ಗೆ 2015-16ರಲ್ಲಿ ಅಂದಿನ ಚಾಮರಾಜನಗರ ಜಿಲ್ಲಾಧಿಕಾರಿಗಳು ಹಾಗೂ ಮೈಸೂರಿನ ಪ್ರಾಜೆಕ್ಟ್ ಟೈಗರ್ ಯೋಜನೆಯ ಪಿಸಿಸಿಎಫ್ ಅವರು ಬೆಂಗಳೂರಿನ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು.

ಈ ಸಂಬಂಧವಾಗಿ ವಿಚಾರಣೆ ಸಂದರ್ಭದಲ್ಲಿ ಈ ಜಮೀನು ಖರೀದಿಗೆ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಈ ಭೂಮಿಯನ್ನು ಕಂದಾಯ ಇಲಾಖೆಯ ವಶಕ್ಕೆ ತೆಗೆದುಕೊಳ್ಳುವಂತೆ ಫೆ 20ರಂದು ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು.
ಅದರಂತೆ ಇದೀಗ ತೆರವು ಕಾರಯಾಚರಣೆ ಆರಂಭವಾಗಿದ್ದು, ಕಂದಾಯ ಇಲಾಖೆಯ ಹಂಗಳ ನಾಡ ಕಛೇರಿಯ ಉಪತಹಸೀಲ್ದಾರ್ ದೀಪಕ್ ನೇತೃತ್ವದಲ್ಲಿ ಪ್ರಭಾರ ರಾಜಸ್ವ ನಿರೀಕ್ಷಕ ನದೀಂಹುಸೇನ್, ಗ್ರಾಮಲೆಕ್ಕಾಧಿಕಾರಿಗಳಾದ ನಾಗೇಂದ್ರಪ್ಪ, ಬಸವರಾಜು, ಗ್ರಾಮಸಹಾಯಕರು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

See also  ಮೈಸೂರಿನಲ್ಲಿ ತಮಿಳರ ಜಲ್ಲಿಕಟ್ಟು ಕ್ರೀಡೆಗಾಗಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು